ಪ್ರತ್ಯೇಕ ಲಿಂಗಾಯತ ಧರ್ಮ ಆಗಬೇಕೆಂಬ ಕೂಗು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಲಿಂಗಾಯತ ಸಮಾಜದ ‌ಕೆಲ ಸಂಘಟನೆಗಳು ವಿನೂತನವಾಗಿ ಹೋರಾಟ ಮಾಡುತ್ತಿದ್ದಾರೆ. ಬೆಳಗಾವಿಯಲ್ಲಿ  ಆಗಸ್ಟ್ 22ರಂದು ಬೃಹತ್ ಲಿಂಗಾಯತ ಸಮಾವೇಶ ನಡೆಯಲಿದೆ. ಇದಕ್ಕೂ ಮುನ್ನ ಬೆನ್ನಲ್ಲೇ ಪ್ರತ್ಯೇಕ ಲಿಂಗಾಯತ ಧರ್ಮ ಸಂವಿಧಾನ ಬದ್ಧವಾಗಬೇಕೆಂದು ಆಗ್ರಹಿಸಿ ಸಿಎಂ ಸಿದ್ದರಾಮಯ್ಯನವರಿಗೆ ರಕ್ತದಲ್ಲಿ ಪತ್ರ ಬರೆಯಲಾಗಿದೆ.

ಬೆಳಗಾವಿ: ಪ್ರತ್ಯೇಕ ಲಿಂಗಾಯತ ಧರ್ಮ ಆಗಬೇಕೆಂಬ ಕೂಗು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಲಿಂಗಾಯತ ಸಮಾಜದ ‌ಕೆಲ ಸಂಘಟನೆಗಳು ವಿನೂತನವಾಗಿ ಹೋರಾಟ ಮಾಡುತ್ತಿದ್ದಾರೆ.

Add Asianetnews Kannada as a Preferred SourcegooglePreferred

ಬೆಳಗಾವಿಯಲ್ಲಿ ಆಗಸ್ಟ್ 22ರಂದು ಬೃಹತ್ ಲಿಂಗಾಯತ ಸಮಾವೇಶ ನಡೆಯಲಿದೆ. ಇದಕ್ಕೂ ಮುನ್ನ ಬೆನ್ನಲ್ಲೇ ಪ್ರತ್ಯೇಕ ಲಿಂಗಾಯತ ಧರ್ಮ ಸಂವಿಧಾನ ಬದ್ಧವಾಗಬೇಕೆಂದು ಆಗ್ರಹಿಸಿ ಸಿಎಂ ಸಿದ್ದರಾಮಯ್ಯನವರಿಗೆ ರಕ್ತದಲ್ಲಿ ಪತ್ರ ಬರೆಯಲಾಗಿದೆ.

ಬೆಳಗಾವಿ ಬಸವ ಸೈನ್ಯ ಕಾರ್ಯಕರ್ತರು ರಕ್ತದಲ್ಲಿ ಬಸವಣ್ಣನವರ ಚಿತ್ರ ಬಿಡಿಸಿ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಆಗ್ರಹಿಸಿ ಆದಷ್ಟು ಬೇಗ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ಒತ್ತಾಯಿಸಿದ್ದಾರೆ.

ಬಸವ ಸೈನ್ಯ ಸಂಘಟನೆ ಅಧ್ಯಕ್ಷ ಸುರೇಶ ಕಿರಾಯಿ ಮಾತನಾಡಿ, ಸರ್ಕಾರ ಆದಷ್ಟು ಬೇಗ ಲಿಂಗಾಯತ ಧರ್ಮವನ್ನು ಪ್ರತ್ಯೇಕ ಧರ್ಮವಾಗಿ ಸಂವಿಧಾನ ಬದ್ಧ ಮಾಡಬೇಕೆಂದು ಆಗ್ರಹಿಸಿದ್ದಾರೆ.