Asianet Suvarna News Asianet Suvarna News

2018 ನಿಮ್ಮ ಪಾಲಿಗೆ ಬಲು ಕಠಿಣ

2018ನೇ ಇಸ್ವಿ ಭಾರತೀಯ ಭದ್ರತಾ ಪಡೆಗಳಿಗೆ ಕಠಿಣವಾಗಿರಲಿದೆ ಎಂದು  ಪಾಕಿಸ್ತಾನ ಮೂಲದ ಲಷ್ಕರ್‌ ಎ ತೊಯ್ಬಾ ಉಗ್ರ ಸಂಘಟನೆ  ಎಚ್ಚರಿಕೆಯನ್ನೂ ನೀಡಿದೆ.

LeT releases an Online Magazine and Says 2018 Will be Tough for Indian Army

ನವದೆಹಲಿ: ರಾಜ್ಯಪಾಲರ ಆಳ್ವಿಕೆ ಹೇರಿಕೆಯಾದ ಬಳಿಕ ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕರ ವಿರುದ್ಧ ಭದ್ರತಾ ಪಡೆಗಳು ಕಾರ್ಯಾಚರಣೆ ತೀವ್ರಗೊಳಿಸಿರುವ ಸಂದರ್ಭದಲ್ಲೇ, ಮುಂಬೈ ಮೇಲೆ 10 ವರ್ಷಗಳ ಹಿಂದೆ ದಾಳಿ ನಡೆಸಿದ್ದ, ಕಾಶ್ಮೀರದಲ್ಲೂ ಭಾರಿ ಉಪಟಳ ನೀಡುತ್ತಿರುವ ಪಾಕಿಸ್ತಾನ ಮೂಲದ ಲಷ್ಕರ್‌ ಎ ತೊಯ್ಬಾ ಉಗ್ರ ಸಂಘಟನೆ ಆನ್‌ಲೈನ್‌ ನಿಯತಕಾಲಿಕೆಯೊಂದನ್ನು ಹೊರತಂದಿದೆ. 2018ನೇ ಇಸ್ವಿ ಭಾರತೀಯ ಭದ್ರತಾ ಪಡೆಗಳಿಗೆ ಕಠಿಣವಾಗಿರಲಿದೆ ಎಂದು ಎಚ್ಚರಿಕೆಯನ್ನೂ ನೀಡಿದೆ.

ವ್ಯೇತ್‌ ಎಂಬ ಹೆಸರಿನ ಕಾಶ್ಮೀರ ಕೇಂದ್ರಿತ ನಿಯತಕಾಲಿಕೆ ಇದಾಗಿದ್ದು, ಕಾಶ್ಮೀರದಲ್ಲಿರುವ ಜನಸಾಮಾನ್ಯರಿಗೆ ನೆರವಾಗುತ್ತಿರುವುದಾಗಿ ಲಷ್ಕರ್‌ ಸಂಘಟನೆ ಇದರಲ್ಲಿ ಹೇಳಿಕೊಂಡಿದೆ. 2017ರಲ್ಲಿ ತಾನು ನಡೆಸಿದ ದಾಳಿಗಳನ್ನು ಈ ಪತ್ರಿಕೆಯಲ್ಲಿ ಉಲ್ಲೇಖಿಸಲಾಗಿದೆ. ಜತೆಗೆ ತನ್ನ ಸಂಘಟನೆಯ ವಕ್ತಾರ ಡಾ. ಅಬ್ದುಲ್ಲಾ ಗಜ್ನವಿ ಎಂಬಾತನ ಸಂದರ್ಶನವನ್ನೂ ಪ್ರಕಟಿಸಲಾಗಿದೆ.

ಲಷ್ಕರ್‌ ಸಂಘಟನೆ ಸ್ಥಳೀಯ ಹುಡುಗರನ್ನೇ ಹೆಚ್ಚಾಗಿ ಭಯೋತ್ಪಾದನೆಗೆ ಬಳಸಿಕೊಳ್ಳುತ್ತದೆ. ಇಂತಹ ನಿಯತಕಾಲಿಕೆಗಳು ಯುವಕರನ್ನು ಆಕರ್ಷಿಸಲು ಆ ಸಂಘಟನೆಗೆ ಸಹಕಾರಿ ಎಂದು ನಿವೃತ್ತ ಐಪಿಎಸ್‌ ಅಧಿಕಾರಿ ಅರುಣ್‌ ಚೌಧರಿ ಎಂಬುವರು ಆತಂಕ ವ್ಯಕ್ತಪಡಿಸಿದ್ದಾರೆ.

Follow Us:
Download App:
  • android
  • ios