ಕಾಶ್ಮೀರದ ಹಲವು ಹುಡುಗಿಯರ ಬಗ್ಗೆ ಮೋಹ ಹೊಂದಿದ್ದ ಸಂದೀಪ್, ಅವರಲ್ಲಿ ಓರ್ವ ಹುಡುಗಿ ಜತೆ ವೈವಾಹಿಕ ಜೀವನಕ್ಕೆ ಕಾಲಿಡಲು ಎಂಥ ಕಾರ್ಯಕ್ಕೂ ಸಿದ್ಧ ಎಂಬ ಮನಸ್ಥಿತಿ ಹೊಂದಿದ್ದ.
ಶ್ರೀನಗರ(ಜು.13): ಎಂಥ ಸಂದರ್ಭ ಬಂದರೂ ಸರಿಯೇ ಕಾಶ್ಮೀರ ಯುವತಿಯನ್ನು ವಿವಾಹವಾಗಬೇಕೆಂಬ ಹಟಮಾರಿತನವೇ ತಾನು ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆಗೆ ಸೇರಲು ಕಾರಣ ಎಂದು ಉತ್ತರ ಪ್ರದೇಶ ಮೂಲದ ಉಗ್ರ ಸಂದೀಪ್ ಶರ್ಮಾ ಹೇಳಿದ್ದಾನೆ.
ಕಳೆದ ಭಾನುವಾರವಷ್ಟೇ ಬಂಧಿತನಾಗಿದ್ದ ಸಂದೀಪ್ ಶರ್ಮಾನನ್ನು ವಿಚಾರಣೆ ನಡೆಸಿದ ಉತ್ತರ ಪ್ರದೇಶ ಭಯೋತ್ಪಾದಕ ನಿಗ್ರ ತಂಡದ ಪೊಲೀಸ್ ಅಧಿಕಾರಿಗಳು, ಕಾಶ್ಮೀರಿ ಹುಡುಗಿಯೊಂದಿಗೆ ಗಾಢವಾದ ಪ್ರೇಮದ ಬಲೆಯಲ್ಲಿ ಬಿದ್ದಿದ್ದರಿಂದಲೇ, ಸಂದೀಪ್ ಉಗ್ರ ಸಂಘಟನೆಗೆ ಸೇರಿಕೊಂಡಿದ್ದಾನೆ ಎಂದು ಹೇಳಿದ್ದಾರೆ.
ಕಾಶ್ಮೀರದ ಹಲವು ಹುಡುಗಿಯರ ಬಗ್ಗೆ ಮೋಹ ಹೊಂದಿದ್ದ ಸಂದೀಪ್, ಅವರಲ್ಲಿ ಓರ್ವ ಹುಡುಗಿ ಜತೆ ವೈವಾಹಿಕ ಜೀವನಕ್ಕೆ ಕಾಲಿಡಲು ಎಂಥ ಕಾರ್ಯಕ್ಕೂ ಸಿದ್ಧ ಎಂಬ ಮನಸ್ಥಿತಿ ಹೊಂದಿದ್ದ. ಈ ಕಾರಣಕ್ಕಾಗಿಯೇ ಕಳೆದ ವರ್ಷವಷ್ಟೇ ಇಸ್ಲಾಂ ಧರ್ಮಕ್ಕೆ ಮತಾಂತರನಾಗಿದ್ದ ಸಂದೀಪ್, ತನ್ನ ಹೆಸರನ್ನು ಅದಿಲ್ ಎಂದು ಬದಲಾಯಿಸಿಕೊಂಡಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಉತ್ತರ ಪ್ರದೇಶ ಉಗ್ರ ನಿಗ್ರಹ ತಂಡದ ವಿಚಾರಣೆ ವೇಳೆ ಈ ಬಗ್ಗೆ ಸ್ವತಃ ಆರೋಪಿ ಸಂದೀಪ್ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
