ಕಳೆದ ನ.21ರಂದು  ಜಮ್ಮು & ಕಾಶ್ಮೀರ ಬ್ಯಾಂಕಿನ ಮಾಲ್ಪೋರಾ ಶಾಖೆಗೆ ನುಗ್ಗಿದ್ದ ಸಶಸ್ತ್ರಧಾರಿಗಳು ರೂ.14 ಲಕ್ಷ ನಗದನ್ನು ದರೋಡೆ ಮಾಡಿದ್ದರು.

ಶ್ರೀನಗರ (ನ.25): ನ.21ರಂದು ನಡೆದ ಬ್ಯಾಂಕ್ ದರೋಡೆಗೆ ಸಂಬಂಧಿಸಿದಂತೆ ಜಮ್ಮು & ಕಾಶ್ಮೀರ ಪೊಲೀಸರು, ಪಾಕಿಸ್ತಾನ ಮೂಲದ ಲಷ್ಕರೆ ತೊಯಿಬಾ ಉಗ್ರ ಸಂಘಟನೆಯ 5 ಮಂದಿಯನ್ನು ಬಂಧಿಸಿದ್ದಾರೆ.

ಕಳೆದ ನ.21ರಂದು ಜಮ್ಮು & ಕಾಶ್ಮೀರ ಬ್ಯಾಂಕಿನ ಮಾಲ್ಪೋರಾ ಶಾಖೆಗೆ ನುಗ್ಗಿದ್ದ ಸಶಸ್ತ್ರಧಾರಿಗಳು ರೂ.14 ಲಕ್ಷ ನಗದನ್ನು ದರೋಡೆ ಮಾಡಿದ್ದರು.

ನಿಖರ ಸುಳಿವಿನ ಆಧಾರದಲ್ಲಿ ಪೊಲೀಸರು ಮಹಮ್ಮದ್ಇಕ್ಬಾಲ್ ವಾನಿಯನ್ನು ಮೊದಲು ಬಂಧಿಸಿದ್ದರು. ತನಿಖೆ ವೇಳೆ ಇತರ ನಾಲ್ಕು ಮಂದಿ ಬಗ್ಗೆ ಆತ ಬಾಯ್ಬಿಟ್ಟಿದ್ದು, ಈ ದರೋಡೆ ನಡೆಸಲು ಎಲ್ಇಟಿ ಯೋಜನ್ ರೂಪಿಸಿದ್ದು, ಅದಕ್ಕೆ ಬೇಕಾದ ಎಲ್ಲಾ ರೀತಿಯ ನೆರವನ್ನು ಅದು ಒದಗಿಸಿದೆ ಎಂದು ಹೇಳಿದ್ದಾನೆ.

(ಸಾಂದರ್ಭಿಕ ಚಿತ್ರ)