ಸಹಾರಾ-ಬಿರ್ಲಾ ಡೈರಿ, ಲೆಹೆರ್ ಸಿಂಗ್ ಡೈರಿ ಹಾಗೂ ಗೋವಿಂದರಾಜು ಡೈರಿ, ಈ ಮೂರು ಪ್ರಕರಣಗಳಲ್ಲಿ ಹಾಲಿ ನ್ಯಾಯಮೂರ್ತಿಯೊಬ್ಬರ ನೇತೃತ್ವದ ಸಮಿತಿಯಿಂದ ಸ್ವತಂತ್ರ ತನಿಖೆ ನಡೆಸುವ ತಾಕತ್ತು ಬಿಜೆಪಿಗೆ ಇದೆಯಾ ಎಂದು ಉಗ್ರಪ್ಪ ಸವಾಲೆಸೆದಿದ್ದಾರೆ.
ಬೆಂಗಳೂರು(ಮಾ. 02): ಕಾಂಗ್ರೆಸ್ ಎಂಎಲ್'ಸಿ ಗೋವಿಂದರಾಜು ಅವರದ್ದೆನ್ನಲಾದ ಡೈರಿಯು ಬರೀ ಬಿಜೆಪಿಯ ಸೃಷ್ಟಿ ಎಂದು ಕಾಂಗ್ರೆಸ್ ಮುಖಂಡ ವಿ.ಎಸ್.ಉಗ್ರಪ್ಪ ಆಪಾದಿಸಿದ್ದಾರೆ. ಯಡಿಯೂರಪ್ಪನವರಂಥ ಭ್ರಷ್ಟರು ಈ ರಾಜ್ಯದಲ್ಲಿ ಬೇರಾರಿಲ್ಲ. ಅವರು ಮಾಡುತ್ತಿರುವ ಅರೋಪಗಳಲ್ಲಿ ಯಾವುದೇ ಹುರುಳಿಲ್ಲ ಎಂದು ಉಗ್ರಪ್ಪ ಅಭಿಪ್ರಾಯಪಟ್ಟಿದ್ದಾರೆ.
ಸಹಾರಾ-ಬಿರ್ಲಾ ಡೈರಿಯನ್ನು ಪ್ರಸ್ತಾಪಿಸಿದ ಉಗ್ರಪ್ಪ, ಆ ಡೈರಿಯಲ್ಲಿ ಅಂದಿನ ಗುಜರಾತ್ ಸಿಎಂ(ನರೇಂದ್ರ ಮೋದಿ), ಮಧ್ಯಪ್ರದೇಶ ಸಿಎಂ ಮತ್ತು ದೆಹಲಿ ಸಿಎಂ ಅವರಿಗೆ ಹಣ ನೀಡಿರುವುದನ್ನು ನಮೂದಿಸಲಾಗಿದೆ. ಈ ಮೂವರಲ್ಲಿ ಯಾರೂ ಕೂಡ ತಾವು ಹಣ ಪಡೆದಿಲ್ಲ ಎಂದು ಸ್ಪಷ್ಟಪಡಿಸಿಯೇ ಇಲ್ಲ ಎಂದು ಉಗ್ರಪ್ಪ ಹೇಳಿದ್ದಾರೆ.
ಸಹಾರಾ-ಬಿರ್ಲಾ ಡೈರಿ, ಲೆಹೆರ್ ಸಿಂಗ್ ಡೈರಿ ಹಾಗೂ ಗೋವಿಂದರಾಜು ಡೈರಿ, ಈ ಮೂರು ಪ್ರಕರಣಗಳಲ್ಲಿ ಹಾಲಿ ನ್ಯಾಯಮೂರ್ತಿಯೊಬ್ಬರ ನೇತೃತ್ವದ ಸಮಿತಿಯಿಂದ ಸ್ವತಂತ್ರ ತನಿಖೆ ನಡೆಸುವ ತಾಕತ್ತು ಬಿಜೆಪಿಗೆ ಇದೆಯಾ ಎಂದು ಉಗ್ರಪ್ಪ ಸವಾಲೆಸೆದಿದ್ದಾರೆ.
ಸುವರ್ಣನ್ಯೂಸ್ ಜೊತೆ ಮಾತನಾಡುತ್ತಿದ್ದ ವಿಎಸ್ ಉಗ್ರಪ್ಪ, 2010ರಲ್ಲಿ ಈ ಯೋಜನೆಯನ್ನು ಮೊದಲು ಪ್ರಸ್ತಾಪಿಸಿದ್ದ ಅಂದಿನ ಸಿಎಂ ಯಡಿಯೂರಪ್ಪ. ನಗರದ ಟ್ರಾಫಿಕ್ ದಟ್ಟಣೆಯನ್ನು ತಪ್ಪಿಸುವ ಉದ್ದೇಶದಿಂದ ಸಿದ್ದರಾಮಯ್ಯನವರು ಈ ಯೋಜನೆಗೆ ಜೀವ ನೀಡಿದರು ಎಂದು ವಿವರಿಸಿದ್ದಾರೆ.