ಕ್ಷಯ ರೋಗಿಗಳಿಗೆ ಮಾಸಿಕ 500 ರು. ಆರ್ಥಿಕ ಬೆಂಬಲ

First Published 14, Jan 2018, 9:19 AM IST
leprosy patients get Rs 500 monthly
Highlights

ಕ್ಷಯ ರೋಗಿಗಳಿಗೆ ಗುಣಮುಖರಾಗುವವರೆಗೆ ಪ್ರಯಾಣ ವೆಚ್ಚ ಭರಿಸಲು ಮತ್ತು ಪೌಷ್ಠಿಕಾಂಶ ಆಹಾರ ಖರೀದಿಸಲು ಮಾಸಿಕ 500ರು. ಸಹಾಯ ಧನ ನೀಡಲು ಚಿಂತಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮೂಲಗಳು ತಿಳಿಸಿವೆ.

ನವದೆಹಲಿ(ಜ.14): ಕ್ಷಯ ರೋಗಿಗಳಿಗೆ ಗುಣಮುಖರಾಗುವವರೆಗೆ ಪ್ರಯಾಣ ವೆಚ್ಚ ಭರಿಸಲು ಮತ್ತು ಪೌಷ್ಠಿಕಾಂಶ ಆಹಾರ ಖರೀದಿಸಲು ಮಾಸಿಕ 500ರು. ಸಹಾಯ ಧನ ನೀಡಲು ಚಿಂತಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮೂಲಗಳು ತಿಳಿಸಿವೆ.

ಸುಮಾರು 25 ಲಕ್ಷದಷ್ಟಿರುವ ಕ್ಷಯ ರೋಗಿಗಳಿಗೆ ಆದಾಯ ಮಿತಿ ಪರಿಗಣನೆಗೆ ತೆಗೆದುಕೊಳ್ಳದೆ, ಹಣ ನೀಡಲು ಉದ್ದೇಶಿಸಲಾಗಿದೆ. ಹಣಕಾಸು ವೆಚ್ಚ ಸಮಿತಿ ಪ್ರಸ್ತಾಪ ಅನುಮೋದಿಸಿ, ಯೋಜನಾ ಕಾರ್ಯಗತ ತಂಡಕ್ಕೆ ರವಾನಿಸಿದೆ. 2025ರೊಳಗೆ ಸಂಪೂರ್ಣ ಕ್ಷಯ ರೋಗ ನಿವಾರಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ರೂಪಿಸಲಾಗಿದೆ.

loader