ಕಾರವಾರ: ಚರ್ಮ ಕಿತ್ತ ಸ್ಥಿತಿಯಲ್ಲಿ ಚಿರತೆ ಮೃತದೇಹ ಪತ್ತೆ
ದಾಂಡೇಲಿ ಅರಣ್ಯದಲ್ಲಿ ಚಿರತೆ ಬೇಟೆಗಾರರನ್ನು ಬಂಧಿಸಿ ಒಂದು ವಾರದ ಅಂತರದಲ್ಲಿ ಮತ್ತೊಂದು ಚಿರತೆಯಯ ಶವ ಕಾರವಾರದ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದೆ.
ಕಾರವಾರ[ಡಿ.30] ತಾಲೂಕಿನ ಹಣಕೋಣದ ಸಾತೇರಿ ದೇವಸ್ಥಾನದ ಸಮೀಪದ ಅರಣ್ಯ ಪ್ರದೇಶದಲ್ಲಿ 3 ವರ್ಷದ ಚಿರತೆಯ ಮೃತದೇಹ ಭಾನುವಾರ ಸಿಕ್ಕಿದೆ.
ಚಿರತೆ ಭಾನುವಾರ ನಸುಕಿನಲ್ಲಿ ಸತ್ತಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಅಂಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಚಿರತೆಯ ದೇಹದ ಒಂದುಕಡೆ ಚರ್ಮ ಕಿತ್ತು ಹೋಗಿದೆ. ಕಳೆದ ಹಲವಾರು ದಿನಗಳಿಂದ ಈ ಭಾಗದಲ್ಲಿ ಚಿರತೆ ಓಡಾಡುತ್ತಿತ್ತು.
ಚಿರತೆಗೆ ಮತ್ತೊಂದು ಮಗು ಬಲಿ.. ಬಳ್ಳಾರಿ ಜನರಿಗೆ ಪ್ರತಿದಿನ ಆತಂಕ
ಮರಣೊತ್ತರ ಪರೀಕ್ಷೆಗಾಗಿ ಡೆಹರಾಡೂನ್‌ಗೆ ದೇಹದ ಮಾದರಿಗಳನ್ನು ರವಾನಿಸಲಾಗಿದೆ. ವಿಷಪ್ರಾಶನದಿಂದ ಅಥವಾ ಉರುಳು ಹಾಕಿ ಸಾಯಿಸಿರುವ ಸಾಧ್ಯತೆ ಇದೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಸ್ಪಷ್ಟ ಕಾರಣ ತಿಳಿಯಬೇಕಿದೆ.
ಶುಕ್ರವಾರ ದಾಂಡೇಲಿ ಸಮೀಪದ ಬರ್ಚಿ ಅರಣ್ಯ ಪ್ರದೇಶದಲ್ಲಿ ಚಿರತೆ ಬೇಟಿಯಾಡಿದ್ದ ಆರೋಪಿಗಳನ್ನು ಬಂಧಿಸಲಾಗಿತ್ತು. ಈ ಘಟನೆ ಮಾಸುವ ಮುನ್ನವೇ ಮತ್ತೊಂದು ಚಿರತೆ ಬಲಿಯಾಗಿದೆ.