ತಿಮ್ಮಣ್ಣ ಎಂಬುವವರ ಜಮೀನಿನಲ್ಲಿ ಇಟ್ಟಿದ್ದ ಬೋನಿನಲ್ಲಿ ಚಿರತೆ ಸೆರೆ | ಚಿರತೆ ನೋಡಲು  ಮುಗಿಬಿದ್ದ ಸ್ಥಳೀಯರು  ದ್ದಿದ್ದಾರೆ.

ರಾಮನಗರ (ಅ.10): ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆಯನ್ನು ಹಿಡಿಯಲು ಅರಣ್ಯ ಇಲಾಖೆ ಇಟ್ಟಿದ್ದ ಬೋನಿನಲ್ಲಿ ಕೊನೆಗೂ ಚಿರತೆ ಸೆರೆಯಾಗಿದೆ.

ರಾಮನಗರ ತಾಲೂಕಿನ ಕೆ.ಪಿ ದೊಡ್ಡಿ ಬಳಿ ಇರುವ ಲಿಲೀನಾಯಕನದೊಡ್ಡಿಯಲ್ಲಿ ಎರಡು ದಿನದ ಹಿಂದೆ ಬೋನು ಇಡಲಾಗಿತ್ತು. 

ತಿಮ್ಮಣ್ಣ ಎಂಬುವವರ ಜಮೀನಿನಲ್ಲಿ ಇಟ್ಟಿದ್ದ ಬೋನಿನಲ್ಲಿ ಚಿರತೆ ಸೆರೆಯಾಗಿದೆ.

ಚಿರತೆ ಕಾಟದಿಂದ ಬೇಸತ್ತಿದ್ದ ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಚಿರತೆ ನೋಡಲು ಸ್ಥಳೀಯರು ಮುಗಿ ಬಿದ್ದಿದ್ದಾರೆ.