ಕಾಡಿನಿಂದ ದಾರಿತಪ್ಪಿದ ಚಿರತೆಯೊಂದು ಕಳೆದ ವರ್ಷ ಬೆಂಗಳೂರಿನ ಖಾಸಗಿ ಶಾಲೆಯೊಂದಕ್ಕೆ ಬಂದಿದ್ದು ಎಲ್ಲರಿಗೂ ಗೊತ್ತೇ ಇದೆ.

ಮೈಸೂರು: ಕಾಡಿನಿಂದ ದಾರಿತಪ್ಪಿದ ಚಿರತೆಯೊಂದು ಕಳೆದ ವರ್ಷ ಬೆಂಗಳೂರಿನ ಖಾಸಗಿ ಶಾಲೆಯೊಂದಕ್ಕೆ ಬಂದಿದ್ದು ಎಲ್ಲರಿಗೂ ಗೊತ್ತೇ ಇದೆ.

ಆದರೆ ಇಲ್ಲೊಂದು ಚಿರತೆ ಆಹಾರ ಅರಸಿಕೊಂಡು ಮೃಗಾಲಯ ಪ್ರವೇಶಿಸಿದ ಘಟನೆ ಮೈಸೂರಿನಲ್ಲಿ ಗುರುವಾರ ನಡೆದಿದೆ. ಚಾಮುಂಡಿ ಬೆಟ್ಟದಿಂದ ದಾರಿ ತಪ್ಪಿ ಬಂದಿದೆ ಎಂದು ಹೇಳಲಾದ ಚಿರತೆ ಚಾಮರಾಜೇಂದ್ರ ಮೃಗಾಲಯದಲ್ಲಿ ಬೆಳಗ್ಗೆ ಪತ್ತೆಯಾಗಿ ಕೆಲಕಾಲ ಆತಂಕ ಸೃಷ್ಟಿಸಿತ್ತು.

ಗುರುವಾರ ಬೆಳಗ್ಗೆ 9ರ ಸುಮಾರಿಗೆ ಪ್ರಾಣಿಪಾಲಕ ರಾಜಶೇಖರ್ ಝೂನಲ್ಲಿ ಪರಿಶೀಲನೆ ನಡೆಸುತ್ತಿದ್ದಾಗ ಮರದ ಮೇಲೆ ಚಿರತೆ ಇರುವುದು ಕಣ್ಣಿಗೆ ಬಿದ್ದಿದೆ.ಅಷ್ಟರಲ್ಲಾಗಲೆ ಹಲವು ಪ್ರವಾಸಿಗರು ಮೃಗಾಲಯ ಪ್ರವೇಶಿಸಿದ್ದ ಹಿನ್ನೆಲೆಯಲ್ಲಿ ಅವರನ್ನೆಲ್ಲ ತಕ್ಷಣ ಹೊರ ಕಳುಹಿಸಲಾಯಿತು.

ಬಳಿಕ ಕೂಡಲೇ ಕಾರ್ಯಪ್ರವೃತ್ತರಾದ ಮೃಗಾಲಯ ವೈದ್ಯಾಧಿಕಾರಿಗಳು ಅರಿವಳಿಕೆ ನೀಡಿ ಚಿರತೆಯನ್ನು ಸೆರೆಹಿಡಿದರು.

(ಸಾಂದರ್ಭಿಕ ಚಿತ್ರ)