ಕಾಡಲ್ಲಿ ಚಿರತೆಗೆ ಮುತ್ತಿಟ್ಟ ಕಾಡುಕೋಣ..! ಹೀಗಿತ್ತು ಆ ಕ್ಷಣ

Leopard and Buffalo Kiss In Rare Moment Caught on Film
Highlights

ಈ ಅಪರೂಪದ ಫೋಟೊವನ್ನು ಬೆನ್ನೆಟ್ ಮಥೋನ್ಸಿ ಎಂಬುವರು ತಮ್ಮ ಕ್ಯಾಮೆರಾ ಕಣ್ಣಿನಲ್ಲಿ ಸೆರೆ ಹಿಡಿದಿದ್ದಾರೆ.

ನವದೆಹಲಿ(ಮೇ.17): ದಕ್ಷಿಣ ಆಫ್ರಿಕಾದ ಅರಣ್ಯ ಪ್ರದೇಶವೊಂದರಲ್ಲಿ ಗಂಡು ಚಿರತೆ ಮತ್ತು ಕಾಡು ಕೋಣ ಪರಸ್ಪರ ಚುಂಬಿಸುವಂತಿರುವ ಅಪರೂಪದ ಫೋಟೊ ಮತ್ತು ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವೈರಲ್ ಆಗಿವೆ. 

ಅಷ್ಟಕ್ಕೂ ನಡೆದದ್ದೇನು ಎಂದ್ರೆ, ಬೆಳಗಿನ ಸೂರ್ಯನ ಕಿರಣಗಳು ಭೂಮಿಗೆ ಮುತ್ತಿಡುವಾಗಲೇ ತನ್ನ ಹಸಿವನ್ನು ನೀಗಿಸಿಕೊಳ್ಳಲು ಚಿರತೆ ಹುಡುಕಾಟ ನಡೆಸಿತ್ತು. ಆದರೆ, ಈ ವೇಳೆ ಗುಂಪಾಗಿ ಇದ್ದ ಹಲವು ಕಾಡು ಕೋಣಗಳು ಚಿರತೆಯ ಮೇಲೆಯೇ ದಾಳಿಗೆ ಮುಂದಾದವು. ಆಗ ತನ್ನ ಚುರುಕುತನದಿಂದ ಮರದ ಮೇಲೆ ಹತ್ತಿದ ಚಿರತೆ ಪ್ರಾಣಾಪಾಯದಿಂದ ಪಾರಾಗಿತ್ತು. 

ವಿಡಿಯೋ ಕೃಪೆ: ನ್ಯಾಷನಲ್ ಜಿಯೋಗ್ರಾಫಿಕ್

ಕೊನೆಯದಾಗಿ ಕೋಣಗಳ ಪೈಕಿ ಒಂದು ಕೋಣ ತನ್ನ ಕುತ್ತಿಗೆಯನ್ನು ಚಿರತೆಯತ್ತ ಹೊರಳಿಸುತ್ತದೆ. ಈ ಸಂದರ್ಭದಲ್ಲಿ ಚಿರತೆಯೂ ಸಹ ತನ್ನ ಕುತ್ತಿಗೆಯನ್ನು ನೆಲದತ್ತ ಹಾಕುತ್ತದೆ. ಒಂದು ಕ್ಷಣ ಆ ಎರಡೂ ಪ್ರಾಣಿಗಳ ತುಟಿಗಳು ಒಂದಕ್ಕೊಂದು ಮೀಟುತ್ತವೆ. ಈ ಅಪರೂಪದ ಫೋಟೊವನ್ನು ಬೆನ್ನೆಟ್ ಮಥೋನ್ಸಿ ಎಂಬುವರು ತಮ್ಮ ಕ್ಯಾಮೆರಾ ಕಣ್ಣಿನಲ್ಲಿ ಸೆರೆ ಹಿಡಿದಿದ್ದಾರೆ.

loader