Asianet Suvarna News Asianet Suvarna News

ಬೆಳಗಾವಿಯ ಸುವರ್ಣಸೌಧದ ಬಳಿಯೇ ಶಾಸಕರ ಭವನ ನಿರ್ಮಾಣಕ್ಕೆ ಸಜ್ಜು

ಶಾಸಕರು ಬೆಳಗಾವಿಯಲ್ಲಿ ವಾಸ ಮಾಡಲು ಬೆಂಗಳೂರು ಮಾದರಿಯಲ್ಲಿ ಶಾಸಕರ ಭವನ ನಿರ್ಮಿಸಲು ಯೋಜನೆ ರೆಡಿಯಾಗುತ್ತಿದೆ. ಆದ್ರೆ ವರ್ಷವಿಡೀ ಅದರ ನಿರ್ವಹಣೆ ಕಷ್ಟ ಎಂಬ ಕಾರಣಕ್ಕೆ ಸರ್ಕಾರ ಖಾಸಗಿಯವರಿಗೆ ನೀಡಲು ಚಿಂತನೆ ನಡೆಸಿದೆ. ಈಗಾಗಲೇ ಬೆಳಗಾವಿಯ ಖಾಸಗಿ ಹೊಟೆಲ್​ ಮಾಲಿಕರೊಬ್ಬರು ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

legislators house to be constructed near suvarna soudha belagavi
  • Facebook
  • Twitter
  • Whatsapp

ಬೆಳಗಾವಿ(ನ. 21): ಅಧಿವೇಶನ ಹಾಗೂ ಇತರ ಸಂದರ್ಭದಲ್ಲಿ ಶಾಸಕರಿಗೆ ಇಲ್ಲಿ ಉಳಿದುಕೊಳ್ಳಲು ಸರಿಯಾದ ವ್ಯವಸ್ಥೆ ಇಲ್ಲದಿರುವ ಕಾರಣಕ್ಕೆ ಸುವರ್ಣ ಸೌಧದ ಪಕ್ಕದಲ್ಲಿಯೇ ಶಾಸಕರ ಭವನ ನಿರ್ಮಿಸಲು ಯೋಜನೆ ರೂಪಿಸಲಾಗುತ್ತಿದೆ. 125 ಎಕರೆ ವಿಸ್ತೀರ್ಣದ ಸುವರ್ಣ ಸೌಧದ ಬಲಭಾಗದಲ್ಲಿ ನಾಲ್ಕು ಬ್ಲಾಕ್'​ಗಳ ಶಾಸಕರ ಭವನ ನಿರ್ಮಿಸಲು ನೀಲಿನಕ್ಷೆ ರೆಡಿಯಾಗುತ್ತಿದೆ. ಅಷ್ಟೇ ಅಲ್ಲ, ಸಾವಿರಾರು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗ್ತಿರುವ ಶಾಸಕರ ಭವನದಲ್ಲಿ ಶಾಸಕರು ಯಾವಾಗಲೂ ಉಳಿದುಕೊಳ್ಳೋದಿಲ್ಲ.. ಹೀಗಾಗಿ ಇದರ ನಿರ್ವಹಣೆ ಖಾಸಗಿಯವರಿಗೆ ನೀಡಲೂ ಸರ್ಕಾರ ಚಿಂತನೆ ನಡೆಸಿದೆ.

ಸರ್ಕಾರದ ಮೂಲಗಳ ಪ್ರಕಾರ ಈಗಾಗಲೇ ಬೆಳಗಾವಿಯ ಖಾಸಗಿ ಹೋಟೆಲ್ ಮಾಲೀಕರೊಬ್ಬರು ಸರ್ಕಾರದ ಜೊತೆ ಮಾತುಕತೆ ಕೂಡ ನಡೆಸಿದ್ದಾರಂತೆ.. ಇಡೀ ವರ್ಷ ಹೋಟೆಲ್ ನಡೆಸಲು ಅನುಮತಿ ನೀಡಬೇಕು. ಅಧಿವೇಶನ ಸಂದರ್ಭದಲ್ಲಿ ಸರ್ಕಾರಕ್ಕೆ ಬಿಟ್ಟುಕೊಡುವುದಾಗಿ ಒಪ್ಪಂದ ಮಾಡಿಕೊಳ್ಳಲಾಗ್ತಿದೆ ಎನ್ನಲಾಗ್ತಿದೆ.

ಈಗಾಗಲೇ ಮಹಾರಾಷ್ಟ್ರದ ನಾಗಪುರದಲ್ಲಿ ಇದೇ ರೀತಿಯ ಹೋಟೆಲ್ ನಡೀತಿದೆ.. ಅದೇ ರೀತಿ ಬೆಳಗಾವಿಯಲ್ಲೂ ಶಾಸಕರ ಭವನ ನಡೆಸಲು ಅವಕಾಶ ನೀಡಿದ್ರೆ, ಸರ್ಕಾರಕ್ಕೆ ಆದಾಯ ಬರುವ ಕುರಿತೂ ಲೆಕ್ಕಾಚಾರ ನಡೆಯುತ್ತಿದೆ.

- ಶಂಕರ ಪಾಗೋಜಿ, ಸುವರ್ಣ ನ್ಯೂಸ್, ಬೆಂಗಳೂರು

Follow Us:
Download App:
  • android
  • ios