ರಾಜ್ಯ ವಿದ್ಯುತ್‌ ಕಾಯ್ದೆ ಪ್ರಕಾರ ವಿದ್ಯುತ್‌ ದುರ್ಬಳಕೆ ಪ್ರಕರಣದಲ್ಲಿ ಆರು ತಿಂಗಳಿಗೆ ಮೀರಿ ಹಿಂಬಾಕಿ ಪಾವತಿಗೆ ಬೇಡಿಕೆಯಿಡಲು ಬೆಸ್ಕಾಂಗೆ ಅವಕಾಶವಿಲ್ಲ.

ಬೆಂಗಳೂರು(ಜೂ.27): ರಾಜ್ಯ ವಿದ್ಯುತ್‌ ಕಾಯ್ದೆ ಪ್ರಕಾರ ವಿದ್ಯುತ್‌ ದುರ್ಬಳಕೆ ಪ್ರಕರಣದಲ್ಲಿ ಆರು ತಿಂಗಳಿಗೆ ಮೀರಿ ಹಿಂಬಾಕಿ ಪಾವತಿಗೆ ಬೇಡಿಕೆಯಿಡಲು ಬೆಸ್ಕಾಂಗೆ ಅವಕಾಶವಿಲ್ಲ.

-ಹೀಗೊಂದು ವಾದ ಮುಂದುರಿಸಿಕೊಂಡು ಬೆಂಗ ಳೂರು ವಿದ್ಯುತ್‌ ಸರಬರಾಜು ಕಂಪನಿ (ಬೆಸ್ಕಾಂ)ನಿಂದ .2.66 ಕೋಟಿ ಹಿಂಬಾಕಿ ಪಾವತಿ ಡಿಮ್ಯಾಂಡ್‌ ನೋಟಿಸ್‌ ಪಡೆದಿರುವ ನಗರದ ಬಿಲ್ಡ​ರ್‍ಸ್ ಕಂಪನಿಯೊಂದು ಹೈಕೋರ್ಟ್‌ ಮೆಟ್ಟಿಲೇರಿದೆ.
ಬೆಸ್ಕಾಂನಿಂದ ಪೂರ್ವಾನುಮತಿ ಪಡೆಯದೇ ಅಪಾರ್ಟ್‌ ಮೆಂಟ್‌'ನ ಹೆಚ್ಚುವರಿ ಬ್ಲಾಕ್‌ಗಳಿಗೆ ವಿದ್ಯುತ್‌ ಪಡೆದ ಆರೋಪದ ಮೇಲೆ ಹಿಂಬಾಕಿ ಪಾವತಿಸಲು ಡಿಮ್ಯಾಂಡ್‌ ನೋಟಿಸ್‌ ಪಡೆದಿರುವುದು ನÜಗ ರದ ಇಂಡಿಯಾ ಬಿಲ್ಡ​ರ್ಸ್ ಕಾರ್ಪೋರೇಷನ್‌ ಎಂಬ ಕಂಪನಿ. ಹಿಂಬಾಕಿ 2,66,41,035 ಕೋಟಿ ನೀಡುವಂತೆ ಬೆಸ್ಕಾಂ ನೀಡಿರುವ ಈ ನೋಟಿಸ್‌ ರದ್ದುಪಡಿಸುವಂತೆ ಕೋರಿ ಬಿಲ್ಡರ್‌ ಕಂಪನಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.

6 ವರ್ಷ ಗಳ ಕಾಲ ವಿದ್ಯುತ್‌ ದುರ್ಬಳಕೆ ಮಾಡಿರುವುದಕ್ಕೆ ಹಿಂಬಾಕಿ ಪಾವತಿಸುವಂತೆ ಸೂಚಿಸಲು ವಿದ್ಯುತ್‌ ಕಾಯ್ದೆಯಲ್ಲಿ ಅವ ಕಾಶವಿಲ್ಲ. ವಿದ್ಯುತ್‌ ಕಾಯ್ದೆಯ-2003ರ ಸೆಕ್ಷನ್‌ 126ರ ಅನ್ವಯ ಕೇವಲ 6 ತಿಂಗಳಿಗೆ ಮಾತ್ರ ಹಿಂಬಾಕಿ ಪಾವತಿಗೆ ಅವಕಾಶವಿದೆ. 6 ತಿಂಗಳ ಮೀರಿ ಹಿಂಬಾಕಿ ಪಾವತಿ ಸಲು ಸೂಚಿಸುವಂತಿಲ್ಲ ಎಂದು ಕಂಪನಿ ವಾದ ಮಂಡಿಸಿದೆ.

ಈ ವಾದ ಆಲಿಸಿದ ಹೈಕೋರ್ಟ್‌, ಬೆಸ್ಕಾಂ ಮುಂದೆಯೇ ನಿಮ್ಮ ಆಕ್ಷೇಪಣೆ ಮಂಡಿಸಬೇಕು. ಬೆಸ್ಕಾಂ ಸಹ 3 ವಾರದಲ್ಲಿ ಕಂಪನಿ ಅಹವಾಲು ಆಲಿಸಿ ಸಕಾರಣಗಳೊಂದಿಗೆ ಸೂಕ್ತ ಆದೇಶ ಹೊರಡಿಸಬೇಕು. ಅಲ್ಲಿಯವರೆಗೆ ಅರ್ಜಿ ವಿಚಾರ ಣೆಗೆ ಬಾಕಿ ಉಳಿಯಲಿದೆ ಎಂದು ಸೂಚಿಸಿದೆ.