ವಾಷಿಂಗ್ಟನ್ (ಮಾ.10): ಆರು ಮುಸ್ಲಿಮ್ ದೇಶಗಳ ಪ್ರಜೆಗಳಿಗೆ ಅಮೆರಿಕಾ ಪ್ರವೇಶವನ್ನು ನಿರ್ಬಂಧಿಸಿ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊರಡಿಸಿರುವ ಪರಿಷ್ಕೃತ ಆದೇಶಕ್ಕೂ ದೇಶದ ಒಳಗಿನಿಂದಲೇ ಕಾನೂನಿನ ತೊಡಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ಟ್ರಂಪ್'ರ ಪರಿಷ್ಕೃತ ಆದೇಶವನ್ನು ತಡೆಯಲು ಅಮೆರಿಕಾದ ಹವಾಯಿ ರಾಜ್ಯವು ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿರುವ ಬೆನ್ನಲ್ಲೇ ವಾಷಿಂಗ್ಟನ್ ರಾಜ್ಯವು ಕೂಡಾ ಆದೇಶವನ್ನು ಪ್ರಶ್ನಿಸಲು ನಿರ್ಧರಿಸಿದೆ.

ಅಧ್ಯಕ್ಷರ ಕ್ರಮದ ವಿರುದ್ಧ ಕಾನೂನು ಸಮರದಲ್ಲಿ ಜತೆ ಸೇರಲು ಒರೆಗಾನ್ ಹಾಗೂ ನ್ಯೂಯಾರ್ಕ್ ರಾಜ್ಯಗಳಿಗೂ ಕೇಳಿಕೊಂಡಿದ್ದೇವೆ ಎಂದು ವಾಷಿಂಗ್ಟನ್ ಅಟಾರ್ನಿ ಜನರಲ್ ಬಾಬ್ ಫರ್ಗುಸನ್ಸಂದರ್ಭದಲ್ಲಿ ಹೇಳಿದ್ದಾರೆ.

ಡೊನಾಲ್ಡ್ ಟ್ರಂಪ್ ಪ್ರಪ್ರಥಮ ಬಾರಿಗೆ ಪ್ರವೇಶ ನಿರ್ಬಂಧವನ್ನು ಹೇರಿದಾಗ ಮೊತ್ತಮೊದಲು ವಿರೋಧಿಸಿದ್ದು ವಾಷಿಂಗ್ಟನ್ ರಾಜ್ಯ. ಬಳಿಕ ನ್ಯಾಯಾಲಯವು ಟ್ರಂಪ್ ಆದೇಶವನ್ನು ತಡೆಹಿಡಿದಿತ್ತು.

ಸೋಮಾಲಿಯಾ, ಇರಾನ್, ಸಿರಿಯಾ, ಸುಡಾನ್, ಲಿಬಿಯಾ ಹಾಗೂ ಯೆಮೆನ್ ದೇಶದ ಪ್ರಜೆಗಳಿಗೆ ಅಮೆರಿಕಾ ಪ್ರವೇಶವನ್ನು ನಿರ್ಬಂಧಿಸಿ ಟ್ರಂಪ್ ಆದೇಶ ಹೊರಡಿಸಿದ್ದರು. ಅದಕ್ಕೆ ಜಗತ್ತಿನಾದ್ಯಂತ ವ್ಯಾಪಕ ಖಂಡನೆಗಳು ವ್ಯಕ್ತವಾಗಿದ್ದವು.

ಪರಿಷ್ಕೃತ ಆದೇಶದಲ್ಲಿ ಈಗಾಗಲೇ ಅಮೆರಿಕಾ ವೀಸಾ ಹೊಂದಿರುವ ವ್ಯಕ್ತಿಗಳಿಗೆ ವಿನಾಯಿತಿ ನೀಡಲಾಗಿದೆ.