ಕೊಪ್ಪಳ [ಜು.12] : ರಾಜ್ಯ ರಾಜಕೀಯದಲ್ಲಿ ಹೈ ಡ್ರಾಮಾ ಮುಂದುವರಿದಿದೆ. ರಾಜೀನಾಮೆ ಪರ್ವವೂ ಕೂಡ ಮುಂದುವರಿದಿದೆ. ಹಲವು ಕಾಂಗ್ರೆಸ್ ಶಾಸಕರು ಈಗಾಗಲೇ ರಾಜೀನಾಮೆ ನೀಡಿದ್ದು, ಬಿಜೆಪಿ ಸೇರುವ ಗುಸು ಗುಸು ಕೇಳಿ ಬರುತ್ತಿದೆ. 

ಇತ್ತ ಕಾಂಗ್ರೆಸ್ ಶಾಸಕ ರಾಘವೇಂದ್ರ ಹಿಟ್ನಾಳ್ ತಮಗೂ ಕೂಡ ಬಿಜೆಪಿಯಿಂದ ಆಫರ್ ಬಂದಿದ್ದಾಗಿ ತಿಳಿಸಿದ್ದಾರೆ. ನನಗೂ ಬಿಜೆಪಿಯಿಂದ ಆಫರ್ ಬಂದಿತ್ತು ಆದರೆ ನಾನೆಂದಿಗೂ ಕೂಡ ಕಾಂಗ್ರೆಸ್ ಬಿಟ್ಟು ಹೋಗುವ ಮಾತೇ ಇಲ್ಲ ಎಂದು ಹೇಳಿದ್ದಾರೆ.

ಕರ್ನಾಟಕ ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ನಾನು ಕಾಂಗ್ರೆಸ್ ತೊರೆದು ಬರುವುದಿಲ್ಲ ಎಂದಾಗ ದೂರ ಸರಿದರು. ರಾಜಕೀಯ ಬಿಕ್ಕಟ್ಟಿನ ಹಿಂದೆ ಸಿದ್ದರಾಮಯ್ಯ ಇದ್ದಾರೆ ಎನ್ನುವುದು ಶುದ್ಧ ಸುಳ್ಳು ಎಂದು ಹಿಟ್ನಾಳ್ ಹೇಳಿದರು.