ತಿರುವನಂತಪುರಂ(ಅ.14): ಇಸ್ರೋ ಮಾಜಿ ವಿಜ್ಞಾನಿ ನಂಬಿ ನಾರಾಯಣನ್‌ ಅವರನ್ನು ಕಾಂಗ್ರೆಸ್‌ ಮುಖಂಡ ಶಶಿ ತರೂರ್‌ ಅವರ ವಿರುದ್ಧ ತಿರುವನಂತಪುರಂ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಲು ಎಡ ಪಕ್ಷಗಳು ಮುಂದಾಗಿವೆ. 

ಜನರಿಂದ ಗೌರವಿಸಲ್ಪಡುವ ಅಭ್ಯರ್ಥಿಯೊಬ್ಬರನ್ನು ತರೂರ್‌ ವಿರುದ್ಧ ಕಣಕ್ಕಿಳಿಸಲು ಆಡಳಿತಾರೂಢ ಸಿಪಿಎಂ ಮತ್ತು ಸಿಪಿಐ ಪಕ್ಷಗಳು ಒಪ್ಪಿದ ಬೆನ್ನಲ್ಲೇ, ನಂಬಿ ನಾರಾಯಣನ್‌ ಅವರ ಹೆಸರು ಕೇಳಿಬಂದಿದೆ. ಆದರೆ, ಚುನಾವಣೆಯಲ್ಲಿ ಸ್ಪರ್ಧಿಸಲು ನಾರಾಯಣನ್‌ ಒಪ್ಪಿಗೆ ನೀಡಿಲ್ಲ ಎನ್ನಲಾಗಿದೆ. 

24 ವರ್ಷಗಳಿಂದ ಗೂಡಚಾರಿಕೆ ಆರೋಪ ಎದುರಿಸುತ್ತಿದ್ದ ನಾರಾಯಣ್‌ ಇತ್ತೀಚೆಗಷ್ಟೇ ಖುಲಾಸೆಗೊಂಡಿದ್ದರು. ತರೂರ್‌ ವಿರುದ್ಧ ನಟ ಮೋಹನ್‌ಲಾಲ್‌ ಅವರನ್ನು ಕಣಕ್ಕೆ ಇಳಿಸಲು ಬಿಜೆಪಿ ಕೂಡಾ ಗಂಭೀರ ಚಿಂತನೆ ನಡೆಸಿದೆ.