ಬೆಳಗಾವಿ [ಮಾ. 06]  ಸಚಿವ ಡಿಕೆ ಶಿವಕುಮಾರ್  ಅವರನ್ನು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರಿಯ ಗಂಡ‌ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ಬೆಳಗಾ ನಗರದ ಖಾಸಗಿ ಹೋಟೆಲ್ ನಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್ ತಂಗಿಯ ಗಂಡ ಮೋಹನ್ ರೆಡ್ಡಿ ಮತ್ತು ಸಚಿವ ಡಿಕೆ ಶಿವಕುಮಾರ್ ರ್ಧ ಗಂಟೆ ಕಾಲ ಮಾತನಾಡಿರುವುದು ಸಹಜವಾಗಿಯೇ ಕುತೂಹಲ ಹೆಚ್ಚಿಸಿದೆ.

ಡಿ.ಕೆ.ಶಿವಕುಮಾರ್ - ಸತೀಶ್ ಜಾರಕಿಹೊಳಿ ನಡುವೆ ಮಾತಿಲ್ಲ

ಸಚಿವ ಡಿಕೆ ಶಿವಕುಮಾರ ಗನ್ ಮ್ಯಾನ್ ಮತ್ತು ಪಿ ಎ ಗಳನ್ನ ದೂರವಿಟ್ಟು ಪ್ರತ್ಯೇಕವಾಗಿ ಇಬ್ಬರು ಮಾತುಕತೆ ನಡೆಸಿದ್ದಾರೆ.  ಡಿಕೆ ಶಿವಕುಮಾರ್ ಮತ್ತು ರಮೇಶ್ ಜಾರಕಿಹೊಳಿ ನಡುವಿನ ಗೊಂದಲ ಬೆಳಗಾವಿಯ ಪಿ ಎಲ್ ಡಿ ಬ್ಯಾಂಕ್ ಚುನಾವಣೆಯಲ್ಲಿ ಪ್ರತಿಫಲಿಸಿ ಇಡೀ ರಾಜ್ಯ ರಾಜಕಾರಣದಲ್ಲಿ ಹೊಸ ಅಲೆ ಏಳಲು ಕಾರಣವಾಗಿತ್ತು.