ಬೆಳಗಾವಿ[ಆ.31]: ಈಗಾಗಲೇ ಕಳೆದ ಚುನಾವಣೆಯಲ್ಲಿ ಸೋಲು ಅನುಭವಿಸಿದ ಲಕ್ಷ್ಮಣ ಸವದಿಗೆ ಸಚಿವ ಸ್ಥಾನವಲ್ಲದೇ, ಉಪ ಮುಖ್ಯಮಂತ್ರಿ ಹುದ್ದೆ ನೀಡಿದ್ದ ವಿಚಾರ ಬಿಜೆಪಿಯಷ್ಟೇ ಅಲ್ಲದೇ ಇತರ ಪಕ್ಷಗಳನ್ನು ಅಚ್ಚರಿಗೀಡು ಮಾಡಿತ್ತು. ಆದರೀಗ ಸ್ವಾಮೀಜಿಯೊಬ್ಬರು ನುಡಿದಿರುವ ಭವಿಷ್ಯ ಭಾರೀ ಕುತೂಹಲ ಮೂಡಿಸಿದೆ. ಅಲ್ಲದೇ ಮುಂದಿನ ಸಿಎಂ ಪಟ್ಟ ಸವದಿ ಪಾಲಾಗುತ್ತಾ? ಎಂಬ ಚರ್ಚೆ ಹುಟ್ಟು ಹಾಕಿದೆ.

ಸೋತರೂ ಡಿಸಿಎಂ, ಸವದಿಗೇಕೆ ಬಿಜೆಪಿಯಲ್ಲಿ ಇಷ್ಟೊಂದು ಪ್ರಾಮುಖ್ಯತೆ?

ಹೌದು ಬೈಲಹೊಂಗಲ ತಾಲೂಕಿನ ಇಂಚಲ ಮಠದ  ಡಾ. ಶಿವಾನಂದ ಭಾರತಿ ಸ್ವಾಮೀಜಿ ಭವಿಷ್ಯ ನುಡಿದಿದ್ದು, ಲಕ್ಷ್ಮಣ ಸವದಿ ಮುಂದಿನ ದಿನದಲ್ಲಿ ಮುಖ್ಯಮಂತ್ರಿ ಆಗುತ್ತಾರೆ ಎಂದಿದ್ದಾರೆ. 'ಲಕ್ಷ್ಮಣ ಸವದಿ ಉಪಮುಖ್ಯಮಂತ್ರಿ ಆಗಿದ್ದು ನನಗೆ ಖುಷಿ ಕೊಟ್ಟಿದೆ. ಅವರು ಜನರ ಸೇವೆ ಮಾಡಲು ಬಂದಿದ್ದಾರೆ. ಇಂತಹ ವ್ಯಕ್ತಿ ನಮ್ಮ ಭಕ್ತನಾಗಿದ್ದು ನನಗೆ ಖುಷಿಯ ವಿಚಾರ. ಅವರು ಕರ್ನಾಟಕದ ಜನರ ಸೇವೆ ಮಾಡಲು ಒಂದು ಹೆಜ್ಜೆ ಮುಂದಿಟ್ಟಿದ್ದಾರೆ, ಮುಂದಿನ ದಿನದಲ್ಲಿ ಮುಖ್ಯಮಂತ್ರಿ ಆಗುತ್ತಾರೆ' ಎಂದಿದ್ದಾರೆ.

ಲಕ್ಷ್ಮಣ್ ಸವದಿಗೆ ಒಲಿದ DCM ಹುದ್ದೆ; ಅವಾಚ್ಯ ಪದಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ ನಿರ್ದೇಶಕ!

ಅಲ್ಲದೇ 'ಲಕ್ಷ್ಮಣ ಸವದಿ ಅವರಿಗೆ ಮುಂದಿನ ದಿನದಲ್ಲಿ ಉನ್ನತ ಮಟ್ಟದ ಸ್ಥಾನ ಕೊಡಲಿ. ಸವದಿ ಮಠದ ಪರಮ ಭಕ್ತರಾಗಿದ್ದವರು. ಅವರು ಜನ ಸೇವೆ ,ಮಠಗಳ ಸೇವೆ ಮಾಡುತ್ತಾ ಬಂದಿದ್ದಾರೆ. ಲಕ್ಷ್ಮಣ ಸವದಿ ಅವರು ನಿಷ್ಠಾವಂತ ವ್ಯಕ್ತಿ, ರಾಜಕಾರಣಿ. ಯಾವುದೇ ಜಾತಿ ಬೇದ ಭಾವವಿಲ್ಲದ ರಾಜಕಾರಣ ಮಾಡುವ ವ್ಯಕ್ತಿ' ಎಂದು ಹೊಗಳಿದ್ದಾರೆ