ವಿದ್ವತ್ ಪರ ವಕೀಲ ಶ್ಯಾಮ್ ಸುಂದರ್’ಗೂ ನಿರಂತರ ಕೊಲೆ ಬೆದರಿಕೆ..!

First Published 22, Feb 2018, 12:26 PM IST
Lawyer Get Death Threat Frome Nalapad Gang
Highlights

ಹ್ಯಾರಿಸ್ ಪುತ್ರ ನಲಪಾಡ್ ವಿರುದ್ಧ ವಾದ ಮಾಡುತ್ತಿರುವ ಖ್ಯಾತ ವಕೀಲ ಶಾಮಸುಂದರ್’ಗೆ ನಿರಂತರವಾಗಿ ಕೊಲೆ ಬೆದರಿಕೆ ಒಡ್ಡಲಾಗುತ್ತಿದೆ. ಮೆಸೇಜ್ ಹಾಗೂ ಫೋನ್ ಕರೆಗಳ ಮೂಲಕ ಬೆದರಿಕೆ ಒಡ್ಡಲಾಗುತ್ತಿದೆ.

ಬೆಂಗಳೂರು :ಹ್ಯಾರಿಸ್ ಪುತ್ರ ನಲಪಾಡ್ ವಿರುದ್ಧ ವಾದ ಮಾಡುತ್ತಿರುವ ಖ್ಯಾತ ವಕೀಲ ಶಾಮಸುಂದರ್’ಗೆ ನಿರಂತರವಾಗಿ ಕೊಲೆ ಬೆದರಿಕೆ ಒಡ್ಡಲಾಗುತ್ತಿದೆ. ಮೆಸೇಜ್ ಹಾಗೂ ಫೋನ್ ಕರೆಗಳ ಮೂಲಕ ಬೆದರಿಕೆ ಒಡ್ಡಲಾಗುತ್ತಿದೆ.

ನಿನ್ನೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದ ಸಂದರ್ಭದಲ್ಲಿ ವಾದ ಮಂಡಿಸುತ್ತಿದ್ದ ವಕೀಲ ಶ್ಯಾಮ್‌ ಸುಂದರ್ ಅವರನ್ನು ಆರೋಪಿ ನಲಪಾಡ್ ಹಾಗೂ ಅವರ ಬೆಂಬಲಿಗರು ದುರುಗುಟ್ಟಿಕೊಂಡು ನೋಡಿದ್ದಾರೆ.

ಅಲ್ಲದೆ, ನ್ಯಾಯಾಲಯದಿಂದ ಹೊರಕ್ಕೆ ಬರುವ ಸಂದರ್ಭದಲ್ಲಿ ನಲಪಾಡ್ ಬೆಂಬಲಿಗರು ‘ಇವನೂ ಬಂದಿದ್ದಾನಾ, ಮುಂದೆ ಇವನಿಗೂ ಗತಿ ಕಾಣಿಸುತ್ತೇವೆ’ ಎಂದು ಬೆದರಿಸಿದ್ದು, ಈ ಹಿನ್ನೆಲೆಯಲ್ಲಿ ಶ್ಯಾಮ್‌ಸುಂದರ್ ರಕ್ಷಣೆ ನೀಡುವಂತೆ ಡಿಸಿಪಿ ರಾಥೋಡ್ ಅವರಿಗೆ ಮನವಿ ಮಾಡಿದ್ದಾರೆ.

loader