ಆಗಸ್ಟ್ ಮೊದಲ ವಾರವನ್ನು ವಿಶ್ವ ಸ್ತನ್ಯಪಾನ ಸಪ್ತಾಹವನ್ನಾಗಿ ಆಚರಿಸಕೊಂಡು ಬರುತ್ತಿದ್ದೇವೆ. ನವಜಾತ ಶಿಶುವಿಗೆ ಬೇಕಾದ ಸಂಪೂರ್ಣ ಆಹಾರ ನೀಡುವ ತಾಯಿ ಹಾಲು ಮಗುವನ್ನು ಎಲ್ಲ ರೀತಿಯಿಂದಲೂ ಸದೃಢರನ್ನಾಗಿಸುತ್ತದೆ ಎಂದು ಅನೇಕ ಸಮೀಕ್ಷೆಗಳಿಂದ ಸಾಬೀತಾಗಿದೆ.
ಮಹಿಳೆಯರು ಸಹ ಇಂದು ಎಲ್ಲ ಕ್ಷೇತ್ರಗಳಲ್ಲಿಯೂ ಮುಂದಿದ್ದಾರೆ. ರಾಜಕಾರಣದಲ್ಲಿಯೂ ಅವರದ್ಧೇ ಛಾಪು ಮೂಡಿಸಿದ್ದಾರೆ. ತಮ್ಮ ಕೆಲಸದಲ್ಲಿ ನಿರತರಾಗಿದ್ದ ವೇಳೆಯೇ ಮಗುವಿಗೆ ಹಾಲುಣಿಸಿ ಮಾದರಿಯಾದ ಪ್ರಮುಖ ಮಹಿಳಾ ಮಣಿಗಳ ಪಟ್ಟಿಯನ್ನು ನೋಡಲೇಬೇಕು. ಇವರು ಉಳಿದ ಮಹಿಳೆಯರಿಗೆ ಆದರ್ಶವಾಗಿ ನಿಲ್ಲುತ್ತಾರೆ.
ಲಾರಿಸಾ ವಾಟರ್ಸ್, ಆಸ್ಟ್ರೇಲಿಯಾ
ಜೂನ್ 2017 ರಂದು ಆಸ್ಟ್ರೇಲಿಯಾದ ಈ ಸಂಸತ್ ಸದಸ್ಯೆ ಸಂಸತ್ ಕಲಾಪದಲ್ಲಿ ಪಾಲ್ಗೊಂಡಿದ್ದ ವೇಳೆಯೇ ತಮ್ಮ ಎರಡು ತಿಂಗಳ ಕಂದನಿಗೆ ಹಾಲುಣಿಸಿದ್ದರು. ಕೋಲ್ ಮೈನಿಂಗ್ ವಿಚಾರದ ಬಗ್ಗೆ ಮಾತನಾಡಿದ ಸದಸ್ಯೆ ಸದನದ ಗಮನವನ್ನು ಸೆಳೆದಿದ್ದರು.
ವಿಲ್ಲೋ ಜೀನ್ ಪ್ರೈಮ್, ನ್ಯೂಜಿಲೆಂಡ್ ನ್ಯೂಜಿಲೆಂಡ್ ನ ಲೇಬರ್ ಪಕ್ಷದ ಸಂಸತ್ ಸದಸ್ಯೆ ನವೆಂಬರ್ 2017 ರಂದು ಮಾದರಿ ಕೆಲಸ ಮಾಡಿದ್ದರು. ವಿಲ್ಲೋ ಜೀನ್ ಪ್ರೈಮ್ ಮತ್ತು ಇನ್ನೊಬ್ಬ ಸದಸ್ಯೆ ಕಿರಿ ಅಲ್ಲಾನ್ ಅಕ್ಕ ಪಕ್ಕದಲ್ಲಿಯೇ ಕುಳಿತಿದ್ದರು. ಅವರು ಸಹ ತಮ್ಮ ಮಗುವನ್ನು ಸಂಸತ್ ಗೆ ಕರೆದುಕೊಂಡು ಬಂದಿದ್ದರು.
ಏಲೇನ್ ಸ್ಯಾಂಡೆಲ್, ಆಸ್ಟ್ರೇಲಿಯಾ ವಿಕ್ಟೋರಿಯನ್ ಪಾರ್ಲಿಮೆಂಟ್ ನಲ್ಲಿ ಹಾಜರಿದ್ದ ಏಲೇನ್ ಸ್ಯಾಂಡೆಲ್ 2017ರ ಸೆಪ್ಟೆಂಬರ್ ನಲ್ಲಿ ಹಾಲುಣಿಸಿದ್ದರು.
ಕ್ರೋಲಿನಾ ಬೆಸ್ಕಾನಾ, ಸ್ಪೇನ್ ಸ್ಪೇನ್ ನ ಸಂಸತ್ತು 013ರ ಜನವರಿಯಲ್ಲಿ ಅಪರೂದ ಘಟನೆಗೆ ಸಾಕ್ಷಿಯಾಗಿತ್ತು. ತಮ್ಮ ಮಗನನ್ನು ಸಂಸತ್ ಗೆ ಕರೆದುಕೊಂಡು ಬಂದಿದ್ದ ಕ್ರೋಲಿನಾ ಹಾಲುಣಿಸಿದ್ದರು.
ಉನ್ನುರ್ ಬ್ರಕೊನಾರಸ್ಟರ್, ಐಸ್ ಲ್ಯಾಂಡ್ ಪ್ರಶ್ನೆಯೊಂದಕ್ಕೆ ಉತ್ತರಿಸಬೇಕಾದ ಸಮಯದಲ್ಲಿಯೇ ತಮ್ಮ ಮಗುವಿಗೆ ಹಾಲುಣಿಸಿ ಉನ್ನುರ್, ನನ್ನ ಮಗುವಿಗೆ ಹಸಿವಾಗಿಒದೆ, ಈ ಸಂದರ್ಭದಲ್ಲಿ ನಾನು ಏನು ಹೇಳಲು ಸಾಧ್ಯವಿಲ್ಲ. ನಂತರ ಮಾತನಾಡುತ್ತೇನೆ ಎಂದು ಹೇಳಿದ್ದರು.
ವಿಕ್ಟೋರಿಯಾ ದೋಂಡಾ, ಅರ್ಜೆಂಟೀನಾ ಜುಲೈ 2015 ರಂದು ಅರ್ಜೇಂಟೀನಾ ನ್ಯಾಶನಲ್ ಕಾಂಗ್ರೆಸ್ ಸಭೆ ವೇಳೆಯೇ ತಾಯಿ ಮಗುವಿನ ಬಾಂಧವ್ಯ ಅನಾವರಣವಾಗಿತ್ತು.
ಇಟಲಿಯ ಲಿಸಿಕಾ ರೌನ್ ಜುಲ್ಲಿ, ಆಸ್ಟ್ರೇಲಿಯಾದ ಕ್ರಿಸ್ಟೆಲ್ ಮಾರ್ಷಲ್, ಯುಕೆಯ ಜುಲಿಯಾ ಡ್ರೌನ್ ಸಹ ತಮ್ಮ ಮಗುವಿಗೆ ಹಾಲುಣಿಸಿ ಮಾದರಿಯಾಗಿದ್ದರು.
