ಕರಾವಳಿ ಪ್ರದೇಶದಲ್ಲಿ ಕೋಮುಗಲಭೆ ಬೂದಿ ಮುಚ್ಚಿದ ಕೆಂಡದಂತಿದೆ. ಜುಲೈ 4ರಂದು  ದುಷ್ಕರ್ಮಿಗಳಿಂದ ಹಲ್ಲೆಗೆ ಒಳಗಾಗಿದ್ದ ಶರತ್ ಮಡಿವಾಳ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ರಾತ್ರಿ ಸಾವನ್ನಪ್ಪಿದ್ದರು. ಇಂದು ಬೆಳಿಗ್ಗೆ ಮಂಗಳೂರಿನ ಎ. ಜೆ ಆಸ್ಪತ್ರೆಯಿಂದ ಅಂತಿಮ ಕ್ರಿಯೆಗಾಗಿ ಅವರ ಮೃತದೇಹವನ್ನು ಸ್ವಗ್ರಾಮ ಸಜಿಪಕ್ಕೆ ತರಲಾಗುತ್ತಿತ್ತು.

ಮಂಗಳೂರು(ಜು.08): ಕರಾವಳಿ ಪ್ರದೇಶದಲ್ಲಿ ಕೋಮುಗಲಭೆ ಬೂದಿ ಮುಚ್ಚಿದ ಕೆಂಡದಂತಿದೆ. ಜುಲೈ 4ರಂದು ದುಷ್ಕರ್ಮಿಗಳಿಂದ ಹಲ್ಲೆಗೆ ಒಳಗಾಗಿದ್ದ ಶರತ್ ಮಡಿವಾಳ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ರಾತ್ರಿ ಸಾವನ್ನಪ್ಪಿದ್ದರು. ಇಂದು ಬೆಳಿಗ್ಗೆ ಮಂಗಳೂರಿನ ಎ. ಜೆ ಆಸ್ಪತ್ರೆಯಿಂದ ಅಂತಿಮ ಕ್ರಿಯೆಗಾಗಿ ಅವರ ಮೃತದೇಹವನ್ನು ಸ್ವಗ್ರಾಮ ಸಜಿಪಕ್ಕೆ ತರಲಾಗುತ್ತಿತ್ತು.

Add Asianetnews Kannada as a Preferred SourcegooglePreferred

ಇವರ ಶವಯಾತ್ರೆಯ ಸಂದರ್ಭದಲ್ಲಿ ಶಾಂತಿ ಕದಡುವ ಯಾವುದೇ ಘಟನೆಗಳಾಗಬಾರದೆಂಬ ದೃಷ್ಟಿಯಿಂದ ಪೊಲೀಸ್ ವ್ಯವಸ್ಥೆ ಮಾಡಲಾಗಿತ್ತು. ಆದರೆ ಇವರ ಶವಯಾತ್ರೆ ಬಿ.ಸಿ ರೋಡ್'ಗೆ ತಲುಪುತ್ತಿದ್ದಂತೆಯೇ ಉದ್ರಿಕ್ತಗೊಂಡ ಯುವಕರು ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಇತ್ತ ಈ ಉದ್ರಿಕ್ತರನ್ನು ತಡೆಯಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ.

ಉದ್ರಿಕ್ತರಿಂದ ಕಲ್ಲು ತೂರಾಟದಿಂದಾಗಿ ಕಾರು, ಆಟೋ ರಿಕ್ಷಾ ಸೇರಿದಂತೆ ಹಲವಾರು ವಾಹನಗಳ ಗಾಜು ಪುಡಿಯಾಗಿವೆ. ಕಲ್ಲು ತೂರಾಟ ನಡೆಸಿದ ಯುವಕರಲ್ಲಿ ಇಬ್ಬರನ್ನು ಪೊಲೀಸರು ಈಗಾಗಲೇ ಬಂಧಿಸಿದ್ದು, ಪರಿಸ್ಥಿತಿ ಹತೋಟಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ.