ಮಾಜಿ ಸಚಿವರ ಪುತ್ರನ ಮೇಲೆ ಮಾರಣಾಂತಿಕ ಹಲ್ಲೆ

First Published 15, Mar 2018, 12:28 PM IST
Late Former Minister C Gurunaths Son Allegedly Attacked
Highlights

ಮಾಜಿ ಸಚಿವ ದಿವಂಗತ ಸಿ. ಗುರುನಾಥ್  ಪುತ್ರ ರಘುನಾಥ್ ಮೇಲೆ ಸಂಬಂಧಿಕರಿಂದಲೇ ಮಾರಣಾಂತಿಕ ಹಲ್ಲೆ ನಡೆದಿದೆ. ಕಲಬುರಗಿಯ ಶಹಬಾದ್ ಪಟ್ಟಣದಲ್ಲಿ ಈ ಘಟನೆ ನಡೆದಿದ್ದು, ಕಬ್ಬಿಣದ ರಾಡ್’ನಿಂದ ಹಲ್ಲೆ ನಡೆಸಲಾಗಿದೆ.

ಕಲಬುರಗಿ: ಮಾಜಿ ಸಚಿವ ದಿವಂಗತ ಸಿ. ಗುರುನಾಥ್  ಪುತ್ರ ರಘುನಾಥ್ ಮೇಲೆ ಸಂಬಂಧಿಕರಿಂದಲೇ ಮಾರಣಾಂತಿಕ ಹಲ್ಲೆ ನಡೆದಿದೆ. ಕಲಬುರಗಿಯ ಶಹಬಾದ್ ಪಟ್ಟಣದಲ್ಲಿ ಈ ಘಟನೆ ನಡೆದಿದ್ದು, ಕಬ್ಬಿಣದ ರಾಡ್’ನಿಂದ ಹಲ್ಲೆ ನಡೆಸಲಾಗಿದೆ.

ಸಂಬಂಧಿಕರಿಂದಲೇ ತಮ್ಮ ತಂದೆಯ ಹತ್ಯೆಯಾಗಿದೆ.  ಅವರದ್ದು ಆತ್ಮಹತ್ಯೆಯಲ್ಲ  ಎಂದು ರಘುನಾಥ್ ಫೇಸ್’ಬುಕ್’ನಲ್ಲಿ ಬರೆದುಕೊಂಡಿದ್ದರು. ಇದರಿಂದ  ಆತ ಹಾಕಿದ್ದ ಪೋಸ್ಟ್ ಡಿಲೀಟ್ ಮಾಡುವಂತೆ ಎಚ್ಚರಿಕೆ ನೀಡಿದ್ದರು. ಆದರೆ ಸಂಬಂಧಿಗಳು ಹೇಳಿದ್ದ ಮಾತನ್ನು ಕೇಳದ ಹಿನ್ನೆಲೆಯಲ್ಲಿ ಮನಬಂದಂತೆ ಥಳಿಸಲಾಗಿದೆ.

ಈ ಸಂಬಂಧ  ರಘುನಾಥ್,  ಸತೀಶ್ ಹಾಗೂ ಅವಿನಾಶ್ ಅವರ ವಿರುದ್ಧ  ದೂರು ನೀಡಿದ್ದಾರೆ. ಶಹಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

loader