ಕರ್ನಾಟಕ ಸರ್ಕಾರ ಕೈಗೆತ್ತಿಕೊಂಡಿರುವ ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಯ ತೀರ್ಪು ಇಂದು ಹೊರಬೀಳಲಿದೆ.

ಮಂಗಳೂರು(ಫೆ.07): ಕರ್ನಾಟಕ ಸರ್ಕಾರ ಕೈಗೆತ್ತಿಕೊಂಡಿರುವ ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಯ ತೀರ್ಪು ಇಂದು ಹೊರಬೀಳಲಿದೆ.

ಅರ್ಜಿ ವಿಚಾರಣೆ ನಡೆಸಿದ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ, ಈ ಯೋಜನೆಯನ್ನು ವಿರೋಧಿಸಿದ್ದು ಏಕೆ ಎಂದು ಅರ್ಜಿದಾರರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ. ಚೆನ್ನೈ ಪೀಠದ ಆದೇಶದಲ್ಲಿ ಉಲ್ಲೇಖಿಸಿದ್ದ ಅಂಶಗಳನ್ನು ದೆಹಲಿ ಪೀಠದೆದುರು ಮತ್ತೆ ಪ್ರಶ್ನಿಸಿದ್ದರ ಕುರಿತು ನಿನ್ನೆ ವಿಚಾರಣೆ ನಡೀತು. ಈ ವೇಳೆ ಕಿಡಿಕಾರಿದ ನ್ಯಾಯಮೂರ್ತಿ ಸ್ವತಂತ್ರಕುಮಾರ್‌ ಅವರ ನ್ಯಾಯಪೀಠವು, ಒಂದು ಹಂತದಲ್ಲಿ ಮರಳಿ ಚೆನ್ನೈ ಪೀಠದೆದುರೇ ಹೋಗಿ ಪ್ರಕರಣ ಇತ್ಯರ್ಥ ಪಡಿಸಿಕೊಳ್ಳುವಂತೆ ಸೂಚಿಸಿದ್ದರು. ನಂತರ ಮಂಗಳವಾರ ತೀರ್ಪು ನೀಡುವುದಾಗಿ ಪ್ರಕಟಿಸಿದರು.

‘ನ್ಯಾಯಾಂಗದ ಶಿಸ್ತನ್ನು ಪಾಲಿಸಿಲ್ಲ’ ಎಂದು ಪ್ರಕರಣದ ದೂರುದಾರರಾದ ಕೆ.ಎನ್‌. ಸೋಮಶೇಖರ್‌ ಹಾಗೂ ಕಿಶೋರ್‌ಕುಮಾರ್‌ ಅವರ ಪರ ವಕೀಲರನ್ನು ತರಾಟೆಗೆ ತೆಗೆದುಕೊಂಡ ಪೀಠವು, ಕುಡಿಯುವ ನೀರಿನ ಯೋಜನೆಗೆ ತಕರಾರು ಎತ್ತಿದ್ದು ಏಕೆ ಎಂದು ಪ್ರಶ್ನಿಸಿದರು.

ಅರ್ಜಿದಾರರು ಹೇಳಿದ್ದೇನು?

-ಯೋಜನೆಗೆ ನಮ್ಮ ತಕರಾರಿಲ್ಲ. ಆದರೆ, ಸರ್ಕಾರ ಮೊದಲು ಕಾನೂನನ್ನು ಪಾಲಿಸಲಿ

-ಸರ್ಕಾರ ಈ ಯೋಜನೆಯ ಕಾಮಗಾರಿಯನ್ನು ಸೂಕ್ಷ್ಮ ಪರಿಸರ ವಲಯದಲ್ಲಿ ನಡೆಸುತ್ತಿದೆ

-ಇದು ಕುಡಿಯುವ ನೀರಿನ ಮಹತ್ವದ ಯೋಜನೆ ಎಂದು ಪ್ರಚಾರ ಮಾಡಲಾಗುತ್ತಿದೆ

-ಪರಿಸರದ ಮೇಲೆ ಉಂಟಾಗುವ ದುಷ್ಪರಿಣಾಮಗಳ ಕುರಿತು ಅಧ್ಯಯನ ನಡೆಸಿಲ್ಲ

-ರಾಜ್ಯ ಸರ್ಕಾರ ಹೇಳಿದಂತೆ ಆ ಪ್ರದೇಶದಲ್ಲಿ 24 ಟಿಎಂಸಿ ಅಡಿ ನೀರಿನ ಲಭ್ಯತೆ ಇಲ್ಲ