ಜಗತ್ತಿಗೆ ಪರಿಚಯವಿರದ ವ್ಯಕ್ತಿ ವಿಡಿಯೋದಲ್ಲಿ ಸೆರೆಈತನ ಹಿನ್ನೆಲೆ ಬಗ್ಗೆ ಯಾರಿಗೂ ಏನೂ ಗೊತ್ತಿಲ್ಲಬ್ರೆಜಿಲ್‌ನ ಅಮೆಜಾನ್ ಕಾಡುಗಳಲ್ಲಿ ವಿಡಿಯೋ ಸೆರೆಬುಡಕಟ್ಟು ಜನಾಂಗದ ಕೊನೆಯ ವ್ಯಕ್ತಿ ಎಂಬ ಶಂಕೆ
ಬ್ರೆಜಿಲ್(ಜು.24): ಈ ವಿಡಿಯೋದಲ್ಲಿರುವ ವ್ಯಕ್ತಿ ಯಾರೆಂಬುದು ಇದುವರೆಗೂ ಯಾರಿಗೂ ತಿಳಿದಿಲ್ಲ. ಆದರೆ ಬ್ರೆಜಿಲ್‌ನ ಅಮೆಜಾನ್ ಕಾಡುಗಳಲ್ಲಿ ಈತ ಇರುವ ವಿಡಿಯೋ ಬಹಿರಂಗವಾಗಿದೆ.
ಹೌದು, ಈ ವಿಡಿಯೋದಲ್ಲಿರುವ ವ್ಯಕ್ತಿ ಯಾರೆಂಬುದು ಇಡೀ ಜಗತ್ತಿನಲ್ಲಿ ಇದುವರೆಗೂ ಯಾರಿಗೂ ಗೊತ್ತಾಗಿಲ್ಲ. ಆದರೆ ಬ್ರೆಜಿಲ್‌ನ ಇಂಡಿಯನ್ ಫೌಂಡೇಶನ್ ಬಿಡುಗಡೆ ಮಾಡಿರುವ ಈ ವಿಡಿಯೋದಲ್ಲಿ ಈ ವ್ಯಕ್ತಿ ಸೆರೆಯಾಗಿದ್ದಾನೆ.
ಈತ ಬ್ರೆಜಿಲ್‌ನ ಅಮೆಜಾನ ಕಾಡುಗಳಲ್ಲಿ ಕಳೆದ 22 ವರ್ಷಗಳಿಂದ ಒಬ್ಬಂಟಿಯಾಗಿ ಬದುಕುತ್ತಿದ್ದು, ತನ್ನ ಬುಡಕಟ್ಟು ಜನರಲ್ಲಿ ಬದುಕುಳಿದಿರುವ ಕೊನೆಯ ವ್ಯಕ್ತಿ ಎಂದು ಅನುಮಾನಿಸಲಾಗಿದೆ.

ಬ್ರೆಜಿಲ್‌ನ ಅಮೆಜಾನ್ ಕಾಡುಗಳಲ್ಲಿ ಸ್ಥಳೀಯ ಬುಡಕಟ್ಟು ಜನರು ವಾಸಿಸುತ್ತಿದ್ದರು. ಆದರೆ ಅವರೆಲ್ಲರೂ ಇದೀಗ ಅಸುನೀಗಿದ್ದು, ಈ ವ್ಯಕ್ತಿ ಮಾತ್ರ ಕಳೆದ 22 ವರ್ಷಗಳಿಂದ ಒಬ್ಬಂಟಿಯಾಗಿ ಬದುಕುತ್ತಿದ್ದಾನೆ ಎಂದು ಅಂದಾಜಿಸಲಾಗಿದೆ.
ಈ ವಿಡಿಯೋದಲ್ಲಿ ಈ ಅಪರೂಪದ ವ್ಯಕ್ತಿ ಮರಗಳನ್ನು ಕಡಿಯುತ್ತಿರುವ ದೃಶ್ಯ ಸೆರೆಯಾಗಿದೆ. ಕಳೆದ 2011 ರಲ್ಲಿ ಈ ವಿಡಿಯೋ ಮಾಡಲಾಗಿದ್ದು, ಕಳೆದ ಮೇ ನಲ್ಲಿ ಚಾರಣ ತಂಡವೊಂದು ಈತ ಇನ್ನೂ ಜೀವಂತವಾಗಿರುವುದನ್ನು ಪತ್ತೆ ಹೆಚ್ಚಿದೆ ಎಂದು ಮೂಲಗಳು ತಿಳಿಸಿವೆ.
