ಬೆಂಗಳೂರು[ಜು.09]: ಇತ್ತ ಸರ್ಕಾರ ಮೈತ್ರಿ ಬಹುಮತವಿಲ್ಲದೇ ಪತನಗೊಳ್ಳುವ ಭೀತಿಯಲ್ಲಿದೆ ಆದರೆ ಅತ್ತ ಗೌಡರ ಫ್ಯಾಮಿಲಿ ಮಾತ್ರ ಸರ್ಕಾರ ಉಳಿಸಿಕೊಳ್ಳಲು ಟೆಂಪಲ್ ರನ್ ಆರಂಭಿಸಿದ್ದಾರೆ.

ಲೋಕೋಪಯೋಗಿ ಸಚಿವ ಎಚ್. ಡಿ ರೇವಣ್ಣ ಶೃಂಗೇರಿಗೆ ಭೇಟಿ ನೀಡಿ ಪೂಜೆ ಮಾಡಿಸಿದ್ದಾರೆ. ಇತ್ತ ಎಚ್. ಡಿ. ದೇವೇಗೌಡರು ಎಚ್ ಎಸ್ ಆರ್ ಲೇಔಟ್ ನ ಬಸವಣ್ಣ ದೇವಸ್ಥಾನಕ್ಕೆ ಭೇಟಿ ನೀಡಿ ಹೋಮ- ಹವನ ಮಾಡಿಸಿದ್ದಾರೆ. ಈ ಮೂಲಕ ಸರ್ಕಾರ ಉಳಿಸಿಕೊಳ್ಳಲು ದೇವರ ಮೊರೆ ಹೋಗಿದ್ದಾರೆ.

ಕುಮಾರಸ್ವಾಮಿ ಕಾಲೆಳೆದ ಕಾಲ, ಉಪ್ಪು ತಿಂದು ನೀರು ಕುಡಿದ ಸಿಎಂ!

ಕಳೆದೊಂದು ವಾರದಿಂದ ರಾಜ್ಯ ರಾಜಕಾರಣದಲ್ಲಿ ಮಹತ್ತರ ಬೆಳವಣಿಗೆಗಳು ನಡೆಯುತ್ತಿದ್ದು, ದೋಸ್ತಿ ಸರ್ಕಾರದ ಹಲವು ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈ ಹಾದಿ ಹಿಡಿದಿದ್ದಾರೆ. ಅತೃಪ್ತ ಶಾಸಕರ ಮನವೊಲಿಸಲು ದೋಸ್ತಿ ನಾಯಕರು ಬಹಳಷ್ಟು ಯತ್ನಿಸುತ್ತಿದ್ದು, ಅಂತಿಮ ಪ್ರಯತ್ನವೆಂಬಂತೆ ಕಾಮರಾಜ ಸೂತ್ರದಂತೆ ನಿನ್ನೆ ಸೋಮವಾರ ಸಚಿವರೆಲ್ಲರೂ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಮುಂದೆ ಏನಾತ್ತೆ? ಸರ್ಕಾರ ಉಳಿಯುತ್ತಾ? ಬೀಳುತ್ತಾ? ಕಾದು ನೋಡಬೇಕಷ್ಟೇ

ಕರ್ನಾಟಕ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ