ವ್ಯವಹಾರ ಕುಸಿತ, ಹೆಚ್ಚುತ್ತಿರುವ ಸ್ಪರ್ಧೆ, ತೈಲ ಬೆಲೆ ಇಳಿಕೆಯಿಂದ ಕೈತಪ್ಪಿದ ಯೋಜನೆಗಳು ಹಾಗೂ ಆಂತರಿಕ ಡಿಜಿಟಲೀಕರಣ ಮೊದಲಾದ ಕಾರಣಗಳಿಂದಾಗಿ ಎಲ್ ಅಂಡ್ ಟಿ ಈ ಕಠಿಣ ಕ್ರಮ ಕೈಗೊಂಡಿದೆ.

ಮುಂಬೈ(ನ. 23): ಭಾರತದ ಅಗ್ರಗಣ್ಯ ಎಂಜಿನಿಯರಿಂಗ್ ಸಂಸ್ಥೆ ಲಾರ್ಸನ್ ಅಂಡ್ ಟೌಬ್ರೋ (L&T) ತನ್ನ 14 ಸಾವಿರ ಉದ್ಯೋಗಿಗಳನ್ನು ಮನೆಗೆ ಕಳುಹಿಸಿದೆ. ಸಂಸ್ಥೆಯ 11.2% ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ. ಎಲ್ ಅಂಡ್ ಟಿ ಇತಿಹಾಸದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಕೆಲಸ ಕಳೆದುಕೊಂಡಿರುವುದು ಇದೇ ಮೊದಲು. ಅಷ್ಟೇ ಅಲ್ಲ, ಭಾರತದ ಕಾರ್ಪೊರೇಟ್ ಇತಿಹಾಸದಲ್ಲೇ ಇದು ಅತ್ಯಂತ ದೊಡ್ಡ ಮೊತ್ತದ ಉದ್ಯೋಗ ನಷ್ಟ ಪ್ರಕರಣಗಳಲ್ಲೊಂದೆನ್ನಲಾಗಿದೆ.

Add Asianetnews Kannada as a Preferred SourcegooglePreferred

ವ್ಯವಹಾರ ಕುಸಿತ, ಹೆಚ್ಚುತ್ತಿರುವ ಸ್ಪರ್ಧೆ, ತೈಲ ಬೆಲೆ ಇಳಿಕೆಯಿಂದ ಕೈತಪ್ಪಿದ ಯೋಜನೆಗಳು ಹಾಗೂ ಆಂತರಿಕ ಡಿಜಿಟಲೀಕರಣ ಮೊದಲಾದ ಕಾರಣಗಳಿಂದಾಗಿ ಎಲ್ ಅಂಡ್ ಟಿ ಈ ಕಠಿಣ ಕ್ರಮ ಕೈಗೊಂಡಿದೆ.

ಎಲ್ ಅಂಡ್ ಟಿ ಸಂಸ್ಥೆಯ ವ್ಯವಹಾರವು ಕಳೆದ ವರ್ಷ ಶೇ.8.6ರಷ್ಟು ಹೆಚ್ಚಳವಾಗಿ 46,885 ಕೋಟಿ ರೂಪಾಯಿ ತಲುಪಿತ್ತು. ಅದರ ಲಾಭವು 1,197 ಕೋಟಿಯಿಂದ 2,044 ಕೋಟಿ ರೂ.ಗೆ ಹೆಚ್ಚಾಯಿತು. ಆದರೆ, ಮುಂದಿನ 5 ವರ್ಷಗಳಲ್ಲಿ ಸಂಸ್ಥೆ ತನ್ನ ವ್ಯವಹಾರವನ್ನು 2 ಲಕ್ಷ ಕೋಟಿಗೆ ಹೆಚ್ಚಿಸಿಕೊಳ್ಳುವ ಗುರಿಯನ್ನು ಇಟ್ಟುಕೊಂಡಿದೆ. ಸಂಸ್ಥೆಯ ಎಲ್ಲಾ ಘಟಕ ಹಾಗೂ ವಿಭಾಗಗಳಲ್ಲಿ ಅನಗತ್ಯ ಉದ್ಯೋಗಗಳನ್ನು ಮೊಟಕುಗೊಳಿಸಿ ಆದಾಯ ಹೆಚ್ಚಿಸಿಕೊಳ್ಳಲು ಯೋಜನೆ ರೂಪಿಸಲಾಗಿದೆ. ಒಟ್ಟು 14 ಸಾವಿರ ಉದ್ಯೋಗಿಗಳನ್ನು ಕೈಬಿಡುವುದು ಈ ಯೋಜನೆಯ ಒಂದು ಭಾಗವಾಗಿದೆ ಎನ್ನಲಾಗಿದೆ. ಜೊತೆಗೆ, ಹೆಚ್ಚು ಲಾಭ ತರದ ಸಂಸ್ಥೆಯ ಘಟಕಗಳ ಹಣೆಬರಹವನ್ನು ಇನ್ನೆರಡು ವರ್ಷದಲ್ಲಿ ನಿರ್ಧರಿಸುವ ಸಾಧ್ಯತೆ ಇದೆ. ಮುಂದಿನ ದಿನಗಳಲ್ಲಿ ಎಲ್ ಅಂಡ್ ಟಿ ಸಂಸ್ಥೆಯಲ್ಲಿ ಶಾಕ್'ಗಳು ಹೊಡೆಯುವುದು ನಿರೀಕ್ಷಿತವೆನಿಸಲಿವೆ.