ಮಂಗಳವಾರದಿಂದ ಜಾರಿಗೆ ಬಂದಿರುವ ನಿಯಮದ ಪ್ರಕಾರ -ಈಜಿಪ್ಟ್, ಜೋರ್ಡಾನ್, ಕುವೈಟ್, ಮೊರೊಕ್ಕೂ, ಖತಾರ್, ಸೌದಿ ಅರೀಬಿಯಾ, ಟರ್ಕಿ ಹಾಗೂ ಯುಏಇ- ಈ 8 ದೇಶಗಳ 10 ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಿಂದ ಬರುವ ಪ್ರಯಾಣಿಕರು ಲ್ಯಾಪ್’ಟಾಪ್, ಐ-ಪ್ಯಾಡ್, ಕ್ಯಾಮೆರಾ ಮುಂತಾದ ಇಲೆಕ್ಟ್ರಾನಿಕ್ ಉಪಕರಣಗಳನ್ನು ಜತೆಗೆ (ಹ್ಯಾಂಡ್’ಬ್ಯಾಗ್) ಒಯ್ಯುವಂತಿಲ್ಲ.
ವಾಷಿಂಗ್ಟನ್ (ಮಾ.21): 7 ದೇಶಗಳ ಪ್ರಜೆಗಳಿಗೆ ಅಮೆರಿಕಾ ಪ್ರವೇಶ ನಿಷೇಧಿಸಿದ್ದ ಟ್ರಂಪ್ ಸರ್ಕಾರವು ಈಗ 8 ದೇಶಗಳಿಂದ ಬರುವ ಪ್ರಯಾಣಿಕರಿಗೆ ಇಲೆಕ್ಟ್ರಾನಿಕ್ ಉಪಕರಣಗಳನ್ನು ಹ್ಯಾಂಡ್’ಬ್ಯಾಗ್’ನಲ್ಲಿ ಒಯ್ಯದಂತೆ ನಿಯಮವನ್ನು ಜಾರಿಗೊಳಿಸಿದೆ.
ಮಂಗಳವಾರದಿಂದ ಜಾರಿಗೆ ಬಂದಿರುವ ನಿಯಮದ ಪ್ರಕಾರ -ಈಜಿಪ್ಟ್, ಜೋರ್ಡಾನ್, ಕುವೈಟ್, ಮೊರೊಕ್ಕೂ, ಖತಾರ್, ಸೌದಿ ಅರೀಬಿಯಾ, ಟರ್ಕಿ ಹಾಗೂ ಯುಏಇ- ಈ 8 ದೇಶಗಳ 10 ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಿಂದ ಬರುವ ಪ್ರಯಾಣಿಕರು ಲ್ಯಾಪ್’ಟಾಪ್, ಐ-ಪ್ಯಾಡ್, ಕ್ಯಾಮೆರಾ ಮುಂತಾದ ಇಲೆಕ್ಟ್ರಾನಿಕ್ ಉಪಕರಣಗಳನ್ನು ಜತೆಗೆ (ಹ್ಯಾಂಡ್’ಬ್ಯಾಗ್) ಒಯ್ಯುವಂತಿಲ್ಲ.
ಆದರೆ ಅಮೆರಿಕಾ ಅಧಿಕಾರಿಗಳು ಈ ಹೊಸ ನಿಯಮದ ಬಗ್ಗೆ ಈವರೆಗೆ ಯಾವುದೇ ಸ್ಪಷ್ಟೀಕರಣ ನೀಡಿಲ್ಲವೆಂದು ವರದಿಯಾಗಿದೆ. ರಾಯಲ್ ಜೋರ್ಡಾನ್ ಏರ’ಲೈನ್ಸ್ ಹೊರಡಿಸಿರುವ ಸೂಚನೆ ಹಾಗೂ ಸೌದಿ ಸುದ್ದಿ ಸಂಸ್ಥೆ ಮಾಡಿರುವುದರಿಂದ ವಿಷಯ ಬಹಿರಂಗವಾಗಿದೆ.
ವೈದ್ಯಕೀಯ ಉಪಕರಣಗಳು ಹಾಗೂ ಮೊಬೈಲ್ ಫೋನ್’ಗಳು ನಿಷೇಧಕ್ಕೆ ಹೊರತಾಗಿವೆ, ಉಳಿದವುಗಳನ್ನು ಲಗೇಜ್ ಜತೆಗೆ ಪ್ಯಾಕ್ ಮಾಡಬೇಕೆಂದು ಜೋರ್ಡಾನಿಯನ್ ರಾಯಲ್ ಏರ್’ಲೈನ್ಸ್ ಹೇಳಿದೆ. ಮೇಲಿನ 8 ದೇಶಗಳಿಂದ ನೇರವಾಗಿ ಅಮೆರಿಕಾದ ನ್ಯೂಯಾರ್ಕ್, ಚಿಕಾಗೋ, ಡೆಟ್ರಾಯಿಟ್ ಹಾಗೂ ಮಾಂಟ್ರೆಲ್’ಗೆ ಹೋಗುವ ವಿಮಾನಗಳಿಗೆ ಈ ನಿಯಮ ಅನ್ವಯಿಸುತ್ತದೆ ಎಂದು ಹೇಳಲಾಗಿದೆ.