ಮೈಸೂರು ಜಿಲ್ಲಾಧಿಕಾರಿ ರಂದೀಪ್​ ಮಾಹಿತಿ ನೀಡಿದ್ದು, ವಿಷ್ಣು ಸ್ಮಾರಕಕ್ಕೆ ಸರ್ಕಾರ ಗುರುತು ಮಾಡಿರುವ ಜಾಗದಲ್ಲಿ ಯಾವುದೇ ವಿವಾದ ಇಲ್ಲ ಎಂದಿದ್ದಾರೆ.

ಮೈಸೂರು (ನ.30): ಕಡೆಗೂ ಸಾಹಸಸಿಂಹ ಡಾ.ವಿಷ್ಣುವರ್ಧನ್​ ಸ್ಮಾರಕ ನಿರ್ಮಾಣಕ್ಕೆ ಅಧಿಕೃತವಾಗಿ ಜಾಗ ಸಿಕ್ಕಂತಾಗಿದೆ. ಡಿಸೆಂಬರ್​ 6 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಷ್ಣು ಸ್ಮಾರಕ್ಕದ ಜಾಗದಕ್ಕೆ ತೆರಳಿ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ.

ಮೈಸೂರು ಜಿಲ್ಲಾಧಿಕಾರಿ ರಂದೀಪ್​ ಮಾಹಿತಿ ನೀಡಿದ್ದು, ವಿಷ್ಣು ಸ್ಮಾರಕಕ್ಕೆ ಸರ್ಕಾರ ಗುರುತು ಮಾಡಿರುವ ಜಾಗದಲ್ಲಿ ಯಾವುದೇ ವಿವಾದ ಇಲ್ಲ ಎಂದಿದ್ದಾರೆ.

ಸರ್ಕಾರ ಮೈಸೂರು ತಾಲೂಕಿನ ಆಲಾಳು ಗ್ರಾಮದಲ್ಲಿ ಗುರುತು ಮಾಡಿರುವ 5 ಎಕರೆ ಭೂಮಿ ಗೋಮಾಳವಾಗಿದ್ದು, ಅದನ್ನು ಸಾರ್ವಜನಿಕ ಉದ್ದೇಶಕ್ಕೆ ಬಳಕೆ ಮಾಡಲಾಗುತ್ತಿದೆ. ಇನ್ನು ಅದೇ ಜಾಗದಲ್ಲಿ ಕೃಷಿ ಮಾಡಿಕೊಂಡು ಬಂದಿರುವ ರೈತ ಕುಟುಂಬಕ್ಕೆ ಮಾನವೀಯ ನೆಲೆಗಟ್ಟಿನಲ್ಲಿ ಪರಿಹಾರ ಕೊಡಿಸುವ ಬಗ್ಗೆ ಯೋಚಿಸಲಾಗುವುದು ಎಂದಿದ್ದಾರೆ. ತಾವು ಉಳುಮೆ ಮಾಡುವ ಜಾಗವನ್ನು ಸರ್ಕಾರ ವಿಷ್ಣು ಸ್ಮಾರಕಕ್ಕೆ ನೀಡುತ್ತಿರುವುದಕ್ಕೆ ರೈತ ಕುಟುಂಬ ಆಕ್ಷೇಪ ವ್ಯಕ್ತಪಡಿಸಿತ್ತು.