ಜೈಲು ಶಿಕ್ಷೆಗೆ ಗುರಿಯಾಗಿ ಅನಾರೋಗ್ಯದಿಂದ ರಿಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಲಾಲು ಯಾದವ್‌ ಆರೋಗ್ಯದಲ್ಲಿ ಏರುಪೇರಾಗಿದೆ ಎಂದು ವೈದ್ಯರು ಹೇಳಿದ್ದಾರೆ. 

ರಾಂಚಿ: ಬಹುಕೋಟಿ ಹಗರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿ ಅನಾರೋಗ್ಯದಿಂದ ರಿಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಲಾಲು ಯಾದವ್‌ ಆರೋಗ್ಯದಲ್ಲಿ ಏರುಪೇರಾಗಿದೆ ಎಂದು ವೈದ್ಯರು ಹೇಳಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಲಾಲು ಅವರ ಬಲಗಾಲಿನಲ್ಲಾದ ಗಾಯದಿಂದ ಹೊರಬರುತ್ತಿರುವ ಕೀವಿನಿಂದಾಗಿ ಅವರ ಆರೋಗ್ಯ ಕ್ಷೀಣಿಸುತ್ತಿದೆ ಎಂದು ರಿಮ್ಸ್‌ ವೈದ್ಯ ಡಾ. ಉಮೇಶ್‌ ಪ್ರಸಾದ್‌ ಹೇಳಿದ್ದಾರೆ. ‘ಇದ್ದಕ್ಕಿದ್ದಂತೆಯೇ ಲಾಲು ಅವರಲ್ಲಿ ದೇಹದಲ್ಲಿ ಸಕ್ಕರೆ ಅಂಶ ಮತ್ತು ರಕ್ತದ ಒತ್ತಡ ಹೆಚ್ಚಾಗಿದೆ. 

ಹೀಗಾಗಿ ಅವರಿಗೆ ನೀಡುವ ಇನ್ಸುಲಿನ್‌ ಪ್ರಮಾಣ ಹೆಚ್ಚಿಸಲಾಗಿದೆ. ಬಲಗಾಲಿನ ಗಾಯದಿಂದ ಕೀವು ಸೋರುವಿಕೆ ಹೆಚ್ಚಾಗಿದ್ದು, ಅವರಿಗೆ ನಿಲ್ಲಲು ಮತ್ತು ಶೌಚಾಲಯಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ,’ ಎಂದು ಹೇಳಿದ್ದಾರೆ.