ಮೇವು ಹಗರಣದ ತೀರ್ಪಿನ ಬಳಿಕ ವಶಕ್ಕೆ ಪಡೆಯಲಾಗಿರುವ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್, ಜೈಲಿನಲ್ಲಿ ಮೊದಲ ದಿನದ ರಾತ್ರಿ ನಿದ್ದೆಯಿಲ್ಲದೆ ಕಳೆದರು. ಅವರು ವಿನಂತಿಸಿಕೊಂಡಲ್ಲಿ ಅವರಿಗೆ ಅಲ್ಲಿ ಕೆಲ ಸೌಲಭ್ಯಗಳು ದೊರೆಯಲಿವೆ.

ರಾಂಚಿ (ಡಿ.25): ಮೇವು ಹಗರಣದ ತೀರ್ಪಿನ ಬಳಿಕ ವಶಕ್ಕೆ ಪಡೆಯಲಾಗಿರುವ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್, ಜೈಲಿನಲ್ಲಿ ಮೊದಲ ದಿನದ ರಾತ್ರಿ ನಿದ್ದೆಯಿಲ್ಲದೆ ಕಳೆದರು. ಬೆಳಗ್ಗೆ ಜೈಲಿನ ತರಕಾರಿ ತೋಟದ ಬಳಿ ಚಹಾ ಮತ್ತು ಬಿಸ್ಕಿಟ್ ಅನ್ನು ಉಪಹಾರವಾಗಿ ಸೇವಿಸಿದರು. ಭಾನುವಾರ ಯಾವುದೇ ವೀಕ್ಷಕರಿಗೆ ಅವಕಾಶ ಇಲ್ಲವಾದುದರಿಂದ, ಲಾಲುಗೆ ಯಾರೊಂದಿಗೂ ಭೇಟಿಯಾಗುವ ಅವಕಾಶ ನೀಡಲಾಗಿರಲಿಲ್ಲ.

ಸೋಮವಾರ ಬೆಳಗ್ಗೆ 8ರಿಂದ 12 ಗಂಟೆ ವರೆಗೆ ಅವರು ಜನರನ್ನು ಭೇಟಿಯಾಗಲು ಅವಕಾಶವಿದೆ. ಲಾಲು ವಿನಂತಿಸಿದಲ್ಲಿ ಸೊಳ್ಳೆ ಪರದೆ ನೀಡಬಹುದು, ಅವರ ಹಾಸಿಗೆ ಪಕ್ಕದಲ್ಲಿ ಒಂದು ಟಿವಿ ಸೆಟ್ ಹಾಕಿಸಿಕೊಳ್ಳಬಹುದು ಮತ್ತು ಒಂದು ಪತ್ರಿಕೆ ಓದಬಹುದು.