Asianet Suvarna News Asianet Suvarna News

ಫಲ ಪುಷ್ಪ ಪ್ರದರ್ಶನಕ್ಕೆ ಶುಲ್ಕ ಏರಿಕೆ ಶಾಕ್

ಲಾಲ್ ಬಾಗ್ ನಲ್ಲಿ ನಡೆಯಲಿರುವ ಫಲಪುಷ್ಟ ಪ್ರದರ್ಶನಕ್ಕೆ ಈ ಬಾರ್ ದರ ಏರಿಕೆ ಶಾಕ್ ತಗುಲಿದೆ. ಜಿಎಸ್ ಟಿ ಸೇರಿ ಫಲಪುಷ್ಟ ಪ್ರದರ್ಶನದ ಶುಲ್ಕವನ್ನು ಏರಿಕೆ ಮಾಡಲಾಗಿದೆ. 

Lalbagh flower show tickets to cost Rs 10 more
Author
Bengaluru, First Published Aug 1, 2018, 8:32 AM IST

ಬೆಂಗಳೂರು :  ದೇಶದಲ್ಲಿ ಜಾರಿಯಾಗಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಲಾಲ್‌ಬಾಗ್‌ನ ಫಲಪುಷ್ಪ ಪ್ರದರ್ಶನಕ್ಕೂ ತಟ್ಟಿದೆ. ಲಾಲ್‌ಬಾಗ್‌ನ ಪ್ರವೇಶ ಶುಲ್ಕದಲ್ಲಿ ಕಳೆದ ಅವಧಿಗಿಂತ ಈ ಬಾರಿ 10 ಹೆಚ್ಚಳವಾಗಲಿದ್ದು, ವಯಸ್ಕರ ಪ್ರವೇಶ ಶುಲ್ಕ 70 ಗೆ ನಿಗಧಿ ಪಡಿಸಲಾಗಿದೆ. ಕಳೆದ ಎರಡು ಅವಧಿಯಲ್ಲಿ ನಿಯಮಗಳನ್ನು ಪಾಲಿಸದೆ ಜಿಎಸ್‌ಟಿ ಶುಲ್ಕ ವಿಧಿಸದ್ದರಿಂದ ಸುಮಾರು 1 ಕೋಟಿವರೆಗೂ ವಾಣಿಜ್ಯ ತೆರಿಗೆ ಇಲಾಖೆ ದಂಡ ವಿಧಿಸಿದೆ. ಈ ದಂಡವನ್ನು ತಪ್ಪಿಸಿಕೊಳ್ಳುವುದಕ್ಕಾಗಿ ಈ ಅವಧಿಯಲ್ಲಿ ಜಿಎಸ್‌ಟಿ ತೆರಿಗೆಯನ್ನು ಹೆಚ್ಚುವರಿಯಾಗಿ ಸೇರಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಲಾಲ್‌ಬಾಗ್‌ನಲ್ಲಿ ನಡೆಯುವ ಫಲಪುಷ್ಪ ಪ್ರದರ್ಶನ ಸಾರ್ವಜನಿಕ ಸೇವೆಯಾಗಿದೆ. ಇದು ಲಾಭದ ಉದ್ದೇಶವಲ್ಲ. ಆದ್ದರಿಂದಾಗಿ ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗಿಡಬೇಕು ಎಂದು ಈಗಾಗಲೇ ಮನವಿ ಮಾಡಲಾಗಿದೆ. ಆದರೆ, ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಮನವಿ ತಿರಸ್ಕರಿಸಿದ್ದು, ಮನೋರಂಜನಾ ಶುಲ್ಕ ನೀಡಬೇಕು ಎಂದು ಸೂಚನೆ ನೀಡಲಾಗಿದೆ. ಆದ್ದರಿಂದ ಶುಲ್ಕ ಹೆಚ್ಚಳ ಅನಿವಾರ್ಯವಾಗಿದೆ ಎಂದು ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಚಂದ್ರಶೇಖರ್ (ಲಾಲ್‌ಬಾಗ್) ತಿಳಿಸಿದ್ದಾರೆ.

ವಾರದ ಎಲ್ಲಾ ದಿನಗಳು ಹೆಚ್ಚುವರಿ ಶುಲ್ಕ ಜಾರಿಯಲ್ಲಿರಲಿದೆ. ಆದರೆ, ಮಕ್ಕಳಿಗೆ ಎಲ್ಲಾ ದಿನಗಳಲ್ಲಿಯೂ 20 ನಿಗದಿ ಮಾಡಲಾಗಿದೆ.  ಸೂರು ಉದ್ಯಾನ ಕಲಾಸಂಘದ ಪದಾಧಿಕಾರಿಗಳು ಹಾಗೂ ರಾಜ್ಯ ತೋಟಗಾರಿಕೆ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ಕಳೆದ ವಾರ ನಡೆದ ಫಲಪುಷ್ಪ ಪ್ರದರ್ಶನದ ಪೂರ್ವಭಾವಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.

Follow Us:
Download App:
  • android
  • ios