ಎಂತಹ ಕಷ್ಟದಲ್ಲಿಯೂ ನಗುಮುಖ ಹೊಂದಿದ್ದ ತಾಯಿ| ತಾಯಿ ಸಂಕಷ್ಟಕ್ಕೆ ಕಣ್ಣೀರಿಟ್ಟ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ|
ಬೆಳಗಾವಿ[ಸೆ.22]: ಜಾರಿ ನಿರ್ದೇಶನಾಲಯ(ಇ.ಡಿ.)ದಿಂದ ವಿಚಾರಣೆ ಎದುರುಸುತ್ತಿರುವ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ನೆನೆದು ಅವರ ಪುತ್ರ ಮೃಣಾಲ್ ಕಣ್ಣೀರು ಹಾಕಿರುವ ಪ್ರಸಂಗ ಶನಿವಾರ ನಡೆದಿದೆ.
ಹೆಬ್ಬಾಳ್ಕರ್ ‘ಲಕ್ಷ್ಮೀ’ ಲೆಕ್ಕ ಕೇಳಿದ ಇಡಿ: ಬರ್ತಿನಿ ಬಿಡಿ ಎಂದ ನಾಯಕಿಯ ಪೊಟೋ ನೋಡಿ!
ಎಂತಹ ಕಷ್ಟದಲ್ಲಿಯೂ ನಗುಮುಖ ಹೊಂದಿದ್ದ ನನ್ನ ತಾಯಿ ಅನುಭವಿಸುತ್ತಿರುವ ಕಷ್ಟನೋಡಿ ಕಣ್ಣಲ್ಲಿ ನೀರು ಬರುತ್ತಿದೆ. ರಾತ್ರಿ ನಿದ್ದೆ ಬರುತ್ತಿಲ್ಲ ಎಂದು ಎಂದು ನೋವು ತೋಡಿಕೊಂಡಿದ್ದಾರೆ. ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಗ್ರಾಮದಲ್ಲಿ ಶನಿವಾರ ನಡೆದ ಕೆರೆ ಅಭಿವೃದ್ಧಿ ಚಾಲನಾ ಕಾರ್ಯಕ್ರಮದಲ್ಲಿ ಮಾತನಾಡಿ, ತಾಯಿಯ ಕಷ್ಟನೆನಪಿಸಿಕೊಂಡು ಭಾವುಕರಾದರು.
ಡಿಕೆಶಿಯಿಂದ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಹೋದ ಕೋಟಿ-ಕೋಟಿ ಹಣದ ರಹಸ್ಯ ಬಯಲು
ಎಂಥದ್ದೆ ಕಷ್ಟಬಂದರೂ ನನ್ನ ತಾಯಿಯ ಮುಖದಲ್ಲಿ ನಗು ಇರುತ್ತದೆ. ನನ್ನ ತಾಯಿಯ ಈ ಗುಣವನ್ನು ನಾವೆಲ್ಲರೂ ಕಲಿಯಬೇಕಿದೆ. ನಿಮಗೆ ಕೈಮುಗಿದು ಕೇಳುತ್ತೇನೆ, ನಿಮ್ಮ ಆಶೀರ್ವಾದ ನಮ್ಮ ತಾಯಿಯ ಮೇಲಿರಲಿ. ನಿಮ್ಮ ಆಶೀರ್ವಾದ ಇದ್ದಷ್ಟು ನಾವು ಕ್ಷೇತ್ರದ ಒಳ್ಳೆಯ ಕೆಲಸ ಮಾಡಲು ಸಾಧ್ಯ ಎಂದರು.
