ಇತ್ತೀಚೆಗಷ್ಟೇ ಮಹಿಳೆಯರಿಗೆ ಕುಕ್ಕರ್ ನೀಡಿ ವಿವಾದಕ್ಕೀಡಾಗಿದ್ದ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಈಗ ಯುವಕರು, ರೈತರು, ಮಾಜಿ, ಹಾಲಿ ಯೋಧರು ಸೇರಿ 8 ಸಾವಿರಕ್ಕೂ ಹೆಚ್ಚು ಜನರಿಗೆ ಇಸ್ತ್ರಿ ಪೆಟ್ಟಿಗೆ ಉಡುಗೊರೆ ನೀಡಿ ಚರ್ಚೆಗೆ ಗ್ರಾಸವಾಗಿದ್ದಾರೆ.
ಬೆಳಗಾವಿ (ಫೆ.16): ಇತ್ತೀಚೆಗಷ್ಟೇ ಮಹಿಳೆಯರಿಗೆ ಕುಕ್ಕರ್ ನೀಡಿ ವಿವಾದಕ್ಕೀಡಾಗಿದ್ದ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಈಗ ಯುವಕರು, ರೈತರು, ಮಾಜಿ, ಹಾಲಿ ಯೋಧರು ಸೇರಿ 8 ಸಾವಿರಕ್ಕೂ ಹೆಚ್ಚು ಜನರಿಗೆ ಇಸ್ತ್ರಿ ಪೆಟ್ಟಿಗೆ ಉಡುಗೊರೆ ನೀಡಿ ಚರ್ಚೆಗೆ ಗ್ರಾಸವಾಗಿದ್ದಾರೆ.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿರುವ ಹೆಬ್ಬಾಳ್ಕರ್ ಅವರು, ನಗರದ ಸಿಪಿಎಡ್ ಮೈದಾನದಲ್ಲಿ ಬುಧವಾರ ತಮ್ಮ ಜನ್ಮದಿನದ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸೇನಾ ಮಾಜಿ, ಹಾಲಿ ಯೋಧರಿಗೆ ಹಾಗೂ ರೈತರಿಗೆ ಸನ್ಮಾನಿಸಿ, ಬಹಿರಂಗವಾ ಗಿಯೇ ಇಸ್ತ್ರಿಪೆಟ್ಟಿಗೆ ಗಿಫ್ಟ್ ನೀಡುವ ಮೂಲಕ ಆಮಿಷವೊಡ್ಡಿದ್ದಾರೆ. ಅಲ್ಲದೇ, ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡಿದ್ದ ೨ ಸಾವಿರ ಯುವಕರಿಗೂ ಇಸ್ತ್ರಿ ಪೆಟ್ಟಿಗೆ ಕಾಣಿಕೆ
ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇಸ್ತ್ರಿ ಪೆಟ್ಟಿಗೆ ಬಾಕ್ಸ್ ಮೇಲೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಭಾವಚಿತ್ರ ಮುದ್ರಿಸಿದ್ದು, ಸೇವಾ ಸನ್ಮಾನ ಪುರಸ್ಕಾರ ಎಂದೂ ಬರೆಯಲಾಗಿದೆ. ಸಮಾರಂಭದ ಬಳಿಕ ಊಟದ ವ್ಯವಸ್ಥೆಯೂ ಇತ್ತು ಎನ್ನಲಾಗಿದೆ.
ಇತ್ತೀಚೆಗಷ್ಟೇ ಅವರ ಪುತ್ರ ಮೃಣಾಲ್ ಹೆಬ್ಬಾಳ್ಕರ್ ಅವರು ಮಹಿಳೆಯರಿಗೆ ರಾತ್ರೋರಾತ್ರಿ ಕುಕ್ಕರ್‌ಗಳನ್ನು ನೀಡಿ, ತಮ್ಮ ತಾಯಿಗೆ ಮತ ಹಾಕುವಂತೆ ಕೈಮುಗಿಯುತ್ತಿದ್ದ ವಿಡಿಯೋ ವೈರಲ್ ಆಗಿತ್ತು.
