ಶಿವಮೊಗ್ಗ[ಮೇ. 28]  ಅತ್ತ ಪ್ರಧಾನಿಯಾಗಿ ನರೇಂದ್ರ ಮೋದಿ ಪ್ರಮಾಣ ವಚನಕ್ಕೆ ಸಿದ್ಧತೆ ಮಾಡಿಕೊಂಡಿದ್ದರೆ ಇತ್ತ ಶಿವಮೊಗ್ಗ ಬಿಜೆಪಿ ಕಾರ್ಯಕರ್ತರ ಬಾಯಿ ಸಿಹಿ ಮಾಡುತ್ತಿದೆ.

150 ಬಾಣಸಿಗರು ಮೂರು ಕಡೆಗಳಲ್ಲಿ ಲಾಡು ತಯಾರು ಮಾಡುತ್ತಿದ್ದಾರೆ.  ಶಿವಮೊಗ್ಗ ಜಿಲ್ಲೆಯ 300 ಬೂತ್‌ಗಳಲ್ಲಿ ತಲಾ 300 ಲಾಡುಗಳು ಹಂಚಲಾಗುತ್ತದೆ. ನರೇಂದ್ರ ಮೋದಿ ಅವರು ಮೇ 30ರ ಸಂಜೆ 7 ಗಂಟೆಗೆ ರಾಷ್ಟ್ರಪತಿ ಭವನದಲ್ಲಿ ಎರಡನೇ ಅವಧಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದರೆ ಇತ್ತ ಶಿವಮೊಗ್ಗದ ಕಾರ್ಯಕರ್ತರು ಬಾಯಿ ಸಿಹಿ ಮಾಡಿಕೊಳ್ಳಲಿದ್ದಾರೆ.

ದೀದಿಗೆ ಮೋದಿ ಏಟು, ಟಿಎಂಸಿ ತೊರೆದ ಇಬ್ಬರು ಶಾಸಕರು, 50 ಮುಖಂಡರು

ಮೋದಿ ಪ್ರಮಾಣಕ್ಕೆ ಬಾಂಗ್ಲಾದೇಶ, ಮ್ಯಾನ್ಮಾರ್‌, ಶ್ರೀಲಂಕಾ, ಥಾಯ್ಲೆಂಡ್‌, ನೇಪಾಳ, ಭೂತಾನ್‌ ಸೇರಿದಂತೆ ವಿವಿಧ ದೇಶದ ನಾಯಕರು ಆಗಮಿಸಲಿದ್ದಾರೆ. ಈಶ್ವರಪ್ಪ ನೇತೃತ್ವದಲ್ಲಿ ಬಿಜೆಪಿ ಮೋದಿ ಪದಗ್ರಹಣವನ್ನು ವಿಶಿಷ್ಟವಾಗಿ ಸಂಭ್ರಮಿಸಲು ಮುಂದಾಗಿದೆ.