ಇಂದು ಮಹಾತ್ಮಾ ಗಾಂಧಿಯವರ 149ನೇ ಜನ್ಮ ದಿನ. ಗಾಂಧಿ ಜಯಂತಿಯನ್ನು ವಿಶೇಷವಾಗಿ ಆಚರಿಸೋದಕ್ಕೆ  ನಮ್ಮ ಬೆಂಗಳೂರು ಫೌಂಡೇಷನ್​ ಹಾಗೂ ಯೂನ್ಯಾಟೆಡ್​ ಬೆಂಗಳೂರು ಸಂಸ್ಥೆ ಮುಂದಾಗಿದೆ.

ಬೆಂಗಳೂರು(ಅ.02): ಇಂದು ಮಹಾತ್ಮಾ ಗಾಂಧಿಯವರ 149ನೇ ಜನ್ಮ ದಿನ. ಗಾಂಧಿ ಜಯಂತಿಯನ್ನು ವಿಶೇಷವಾಗಿ ಆಚರಿಸೋದಕ್ಕೆ ನಮ್ಮ ಬೆಂಗಳೂರು ಫೌಂಡೇಷನ್​ ಹಾಗೂ ಯೂನ್ಯಾಟೆಡ್​ ಬೆಂಗಳೂರು ಸಂಸ್ಥೆ ಮುಂದಾಗಿದೆ.

ನಮ್ಮ ಬೆಂಗಳೂರು, ಸ್ವಚ್ಛ ಬೆಂಗಳೂರು ಎಂಬ ಘೋಷವಾಕ್ಯದೊಂದಿಗೆ ಕೆರೆಗಳು ಹಾಗೂ ಕೆಲ ವಾರ್ಡ್​ಗಳನ್ನ ಸ್ವಚ್ಛಗೊಳಿಸುವ ಮೂಲಕ ಗಾಂಧಿಜಯಂತಿ ಆಚರಿಸುತ್ತಿದೆ. ಗಾಂಧಿಜೀ ಕಂಡ ಸ್ವಚ್ಛ ಗ್ರಾಮ ಕನಸನ್ನು ನನಸು ಮಾಡುವ ಉದ್ದೇಶದಿಂದ ನಮ್ಮ ಬೆಂಗಳೂರು ಫೌಂಡೇಶನ್​ ಹಾಗೂ ರಾಜ್ಯಸಭಾ ಸದಸ್ಯ ರಾಜೀವ್​ ಚಂದ್ರಶೇಖರ್​ ವಿಶೇಷವಾಗಿ ಆಚರಿಸುತ್ತಿದ್ದಾರೆ.

ಕೋರಮಂಗಲದಿಂದ ನಾಗರಭಾವಿವರೆಗೂ ಸ್ವಚ್ಛತೆ ಜಾಥಾ ನಡೆಯಲಿದ್ದು , ಜಾಥಾದ ನೇತೃತ್ವವನ್ನು ಸಂಸದ ರಾಜೀವ್ ಚಂದ್ರಶೇಖರ್​ ವಹಿಸಿದ್ದಾರೆ. ಜಾಗೃತಿ ಱಲಿಯಲ್ಲಿ ವಿವಿಧ ಬಡಾವಣೆಗಳಿಂದ ಜನರು ಭಾಗಿಯಾಗಿದ್ದಾರೆ.