ಬೆಂಗಳೂರು(ಸೆ.14): ಸಂಸದ ಡಿ.ಕೆ.ಸುರೇಶ್ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತೆಯೊಬ್ಬರು ಸಿಎಂ ಸಿದ್ದರಾಮಯ್ಯಗೆ ದೂರು ನೀಡಿದ್ದಾರೆ. ಡಿ.ಕೆ.ಸುರೇಶ್ ಕಿರುಕುಳ ನೀಡುತ್ತಿದ್ದಾರೆ ಅಂತ ಶಶಿಕಲಾ ಎನ್ನುವವರು ದೂರು ನೀಡಿದ್ದಾರೆ.
ಶಶಿಕಲಾ, ಕಳೆದ ಬಾರಿ ಕಾರ್ಪೊರೇಷನ್ ಚುನಾವಣೆಗೆ ಕಾಂಗ್ರೆಸ್'ನಿಂದ ಸ್ಪರ್ಧಿಸಿದ್ದರು. ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂಗೆ ಶಶಿಕಲಾ ದೂರು ನೀಡಿದ್ದರು. ತಮಗೆ ಸಂಸದ ಸುರೇಶ್ ಮಾನಸಿಕ ಕಿರುಕುಳ ನೀಡುತ್ತಿದ್ದು, ಇದರಿಂದ ಇಡೀ ಕುಟುಂಬ ನೋವು ಅನುಭವಿಸುವಂತಾಗಿದೆ.
ಮೊನ್ನೆ ರಾಜರಾಜೇಶ್ವರಿ ನಗರದಲ್ಲಿ ಕಾವೇರಿ ಗಲಾಟೆ ವಿಚಾರವಾಗಿ ತಮ್ಮ ಪತಿ ಸೇರಿದಂತೆ ನಮ್ಮ ಮನೆಯವರನ್ನು ಬಂಧಿಸಿದ್ದಾರೆ. ಬಿಡುಗಡೆ ಮಾಡಿ ಅಂತ ಪೊಲೀಸರಿಗೆ ಮನವಿ ಮಾಡಿಕೊಂಡ್ರೆ ಡಿ.ಕೆ ಸುರೇಶ್ ಅವರಿಂದ ಹೇಳಿಸಿ ಅಂತ ಹೇಳ್ತಿದ್ದಾರೆ ಅಂತ ಸಿಎಂ ಎದುರು ಶಶಿಕಲಾ ಅಳಲು ತೋಡಿಕೊಂಡಿದ್ದಾರೆ.
