ಕಟ್ಟಿಕೊಂಡವನು‌ ಬೇರೆ ಮದ್ವೆ ಆಗ್ತಿದ್ದಾನೆ ಆಂತಾ ಗೃಹಿಣಿಯೊಬ್ಬಳು ಆತ್ಮ ಹತ್ಯೆಗೆ ಯತ್ನಿಸಿದ ಘಟನೆ ಬೆಂಗಳೂರಿನ ಗಾಯತ್ರಿನಗರದಲ್ಲಿ ನಡೆದಿದೆ.

ಬೆಂಗಳೂರು(ಮಾ.03): ಕಟ್ಟಿಕೊಂಡವನು‌ ಬೇರೆ ಮದ್ವೆ ಆಗ್ತಿದ್ದಾನೆ ಆಂತಾ ಗೃಹಿಣಿಯೊಬ್ಬಳು ಆತ್ಮ ಹತ್ಯೆಗೆ ಯತ್ನಿಸಿದ ಘಟನೆ ಬೆಂಗಳೂರಿನ ಗಾಯತ್ರಿನಗರದಲ್ಲಿ ನಡೆದಿದೆ.

ಎರಡು ವರ್ಷದ ಹಿಂದೆ ಉಮಾ ಎಂಬಾಕೆ ವಿನಯ್'ನೊಂದಿಗೆ ಮದ್ವೆಯಾಗಿತ್ತು. ನಂತರ ಆತ ಪರಸ್ತ್ರಿಯನ್ನು ವರಿಸುವ ಸಲುವಾಗಿ ಉಮಾಳಿಗೆ ಕಿರುಕುಳ ನೀಡಿ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದ. ಇವರಿಬ್ಬರು ಮದ್ವೆಯಾಗಿರುವ ವಿಷಯ ಸ್ವತಃ ವಿನಯ್'ನ ತಂದೆ ತಾಯಿಗೂ ಗೊತ್ತಿರಲಿಲ್ಲವಂತೆ. ಇನ್ನು ಪತಿ ವಿನಯ್ ಈಗ ಮತ್ತೊಬ್ಬಳನ್ನು ಮದ್ವೆಯಾಗ್ತಿದ್ದಾನೆ ಎಂದು ಆರೋಪಿಸಿ ಉಮಾ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

ಘಟನೆ ಸಂಬಂಧ ವನಿತಾ ಸಹಾಯವಾಣಿಗೂ ಉಮಾ ದೂರು ನೀಡಿದ್ರೂ ಎನೂ ಪ್ರಯೋಜನವಾಗಿಲ್ಲ. ಹೀಗಾಗಿ ತನಗೆ ಆದಂತಹ ಸ್ಥಿತಿ ಯಾರಿಗೂ ಬರಬಾರದು ಎಂದು ಅವಲತ್ತುಕೊಂಡಿದ್ದಾಳೆ.