ಗೆಳತಿ ಜೊತೆ ಸೇರಿ ಪತಿಗೆ ವಿಷಪ್ರಾಶನ ಮಾಡಿಸಿ ಕೊಲೆಗೈದು ಮೃತದೇಹವನ್ನು ಸ್ಮಶಾನಕ್ಕೆ ಕೊಂಡೊಯ್ಯುವ ವೇಳೆ ಪೋಲಿಸರ ಕೈಗೆ ಮಹಿಳೆ ಸಿಕ್ಕಿಬಿದ್ದಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ನಡೆದಿದೆ. ಪಟ್ಟಣದ ವಿವೇಕರಾಯ್ ಎಂಬಾತನೇ ಮೃತ ದುರ್ದೈವಿ. ವಿವೇಕ್ರಾಯ್ ಪತ್ನಿ ಶಿಲ್ಪಾ, ತನ್ನ ಗೆಳತಿ ಗಂಗಾ ಎಂಬುವಳೊಂದಿಗೆ ಸೇರಿ ವಿವೇಕರಾಯ್'ಗೆ ವಿಷ ಪ್ರಾಶನ ಮಾಡಿಸಿ ಕೊಲೆಗೈದಿದ್ದಾರೆ. ಇನ್ನು ಮೃತದೇಹವನ್ನು ಸ್ಮಶಾನಕ್ಕೆ ಸಾಗಿಸುವ ವೇಳೆ ಪೋಲಿಸರು ವಿಚಾರಣೆ ನಡೆಸಿದ ಸಂದರ್ಭದಲ್ಲಿ ಆರೋಪಿಗಳು ಸಿಕ್ಕಿಬಿದ್ದಿದ್ದು, ಇದೀಗ ಇಬ್ಬರು ಆರೋಪಿಗಳು ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಈ ಕುರಿತು ಮುಧೋಳ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಬಾಗಲಕೋಟೆ(ಅ.15): ಗೆಳತಿ ಜೊತೆ ಸೇರಿ ಪತಿಗೆ ವಿಷಪ್ರಾಶನ ಮಾಡಿಸಿ ಕೊಲೆಗೈದು ಮೃತದೇಹವನ್ನು ಸ್ಮಶಾನಕ್ಕೆ ಕೊಂಡೊಯ್ಯುವ ವೇಳೆ ಪೋಲಿಸರ ಕೈಗೆ ಮಹಿಳೆ ಸಿಕ್ಕಿಬಿದ್ದಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ನಡೆದಿದೆ.
ಪಟ್ಟಣದ ವಿವೇಕರಾಯ್ ಎಂಬಾತನೇ ಮೃತ ದುರ್ದೈವಿ. ವಿವೇಕ್ರಾಯ್ ಪತ್ನಿ ಶಿಲ್ಪಾ, ತನ್ನ ಗೆಳತಿ ಗಂಗಾ ಎಂಬುವಳೊಂದಿಗೆ ಸೇರಿ ವಿವೇಕರಾಯ್'ಗೆ ವಿಷ ಪ್ರಾಶನ ಮಾಡಿಸಿ ಕೊಲೆಗೈದಿದ್ದಾರೆ. ಇನ್ನು ಮೃತದೇಹವನ್ನು ಸ್ಮಶಾನಕ್ಕೆ ಸಾಗಿಸುವ ವೇಳೆ ಪೋಲಿಸರು ವಿಚಾರಣೆ ನಡೆಸಿದ ಸಂದರ್ಭದಲ್ಲಿ ಆರೋಪಿಗಳು ಸಿಕ್ಕಿಬಿದ್ದಿದ್ದು, ಇದೀಗ ಇಬ್ಬರು ಆರೋಪಿಗಳು ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಈ ಕುರಿತು ಮುಧೋಳ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
