ನಿನ್ನೆ ರಾತ್ರಿಯಿಂದ ಬೀದರ್​ನ KIADB ಪ್ಲಾಟ್​ನಲ್ಲಿದ್ದ 100ಕ್ಕೂ ಹೆಚ್ಚು ಅಲೆಮಾರಿ ಕುಟುಂಬಗಳು ಬೀದಿಯಲ್ಲೇ ಮಲಗಿವೆ. ತೆರವು ಕಾರ್ಯಾಚರಣೆಯಿಂದ ಆಶ್ರಯ ಕಳೆದುಕೊಂಡು ಕಣ್ಣೀರಿಡುತ್ತಿವೆ.

ಬೀದರ್ (ನ.22): ನಿನ್ನೆ ರಾತ್ರಿಯಿಂದ ಬೀದರ್​ನ KIADB ಪ್ಲಾಟ್​ನಲ್ಲಿದ್ದ 100ಕ್ಕೂ ಹೆಚ್ಚು ಅಲೆಮಾರಿ ಕುಟುಂಬಗಳು ಬೀದಿಯಲ್ಲೇ ಮಲಗಿವೆ. ತೆರವು ಕಾರ್ಯಾಚರಣೆಯಿಂದ ಆಶ್ರಯ ಕಳೆದುಕೊಂಡು ಕಣ್ಣೀರಿಡುತ್ತಿವೆ.

ಅಮಾನವೀಯ ಅಂದರೆ ಬೀದಿಗೆ ಬಿದ್ದಿದ್ದ ಗರ್ಭಿಯೊಬ್ಬಳಿಗೆ ನಿನ್ನೆ ರಾತ್ರಿ ಹೆರಿಗೆ ನೋವು ಕಾಣಿಸಿಕೊಂಡಿದ್ದು ರಸ್ತೆ ಬದಿಯಲ್ಲೇ ಮಗುವಿಗೆ ಜನ್ಮ ನೀಡಿದ್ದಾಳೆ. ಮೈಕೊರೆಯುವ ಚಳಿಯಲ್ಲಿ ಮಧ್ಯರಾತ್ರಿ ಮಗುವಿಗೆ ಜನ್ಮನೀಡಿದ್ದು ಬಾಣಂತಿ ರಸ್ತೆಬದಿ ಕಾಲ ಕಳೆಯುತ್ತಿದ್ದಾಳೆ. ಪುಟ್ಟ ಪುಟ್ಟ ಮಕ್ಕಳು, ಬಾಣಂತಿಯರು, ವೃದ್ಧರು ಬೀದಿಯಲ್ಲಿ ನರಳಾಡುತ್ತಿದ್ದರೂ ಯಾವೊಬ್ಬ ಜನಪ್ರತಿನಿಧಿಯೂ ಈವರೆಗೆ ಸ್ಥಳಕ್ಕೆ ಮಾತ್ರ ಬಂದಿಲ್ಲ. ಕೂಲಿ ಮಾಡಿ ಬದುಕುತ್ತಿದ್ದ ಕುಟುಂಬಗಳು ಆಶ್ರಯ ಇಲ್ಲದೆ ಬೀದಿಯಲ್ಲೇ ಕಣ್ಣೀರಿಡುತ್ತಿವೆ.