Asianet Suvarna News Asianet Suvarna News

ಕೊಪ್ಪಳದ ಶೌಚಾಲಯ ಸಮಸ್ಯೆ ಫೇಸ್ಬುಕ್'ನಲ್ಲಿ ಲೈವ್

ಫೇಸ್​​​ಬುಕ್, ವಾಟ್ಸಪ್​ ಅಂದ್ರೆ ಸಾಕು ಇತ್ತೀಚಿನ ದಿನಗಳಲ್ಲಿ ಅವೆಲ್ಲ ಟೈಂ ಪಾಸ್​'ಗಾಗಿ ಅಂತ ಅಂದುಕೊಳ್ಳುತ್ತೇವೆ. ಆದರೆ ಇಲ್ಲೊಬ್ಬ ಮಹಿಳೆ ಮೊಬೈಲ್​'ನಲ್ಲಿ ಫೇಸ್​​ ಬುಕ್ ಲೈವ್​ ಮೂಲಕ ಶೌಚಾಲಯದ ಸಮಸ್ಯೆ ಬಗೆಹರಿಸಲು ಮುಂದಾಗಿದ್ದಾಳೆ. ಅರೇ ಇದೇನಿದು ಅಂತೀರಾ? ಹಾಗಾದ್ರೆ ಈ ರಿಪೋರ್ಟ್ ನೋಡಿ.

Lady Exposed The Toilet Problem Of Koppal Through Facebook Live
  • Facebook
  • Twitter
  • Whatsapp

ಕೊಪ್ಪಳ(ಜೂ.29): ಫೇಸ್​​​ಬುಕ್, ವಾಟ್ಸಪ್​ ಅಂದ್ರೆ ಸಾಕು ಇತ್ತೀಚಿನ ದಿನಗಳಲ್ಲಿ ಅವೆಲ್ಲ ಟೈಂ ಪಾಸ್​'ಗಾಗಿ ಅಂತ ಅಂದುಕೊಳ್ಳುತ್ತೇವೆ. ಆದರೆ ಇಲ್ಲೊಬ್ಬ ಮಹಿಳೆ ಮೊಬೈಲ್​'ನಲ್ಲಿ ಫೇಸ್​​ ಬುಕ್ ಲೈವ್​ ಮೂಲಕ ಶೌಚಾಲಯದ ಸಮಸ್ಯೆ ಬಗೆಹರಿಸಲು ಮುಂದಾಗಿದ್ದಾಳೆ. ಅರೇ ಇದೇನಿದು ಅಂತೀರಾ? ಹಾಗಾದ್ರೆ ಈ ರಿಪೋರ್ಟ್ ನೋಡಿ.

ಕೊಪ್ಪಳ ತಾಲೂಕಿನ ಭಾಗ್ಯನಗರ ಪಟ್ಟಣದ ಬಾಬುಜಗಜೀವನರಾಂ ಕಾಲೋನಿ ಫೇಸ್​​​ಬುಕ್​ ಲೈವ್​ ಒಂದಕ್ಕೆ ಸಾಕ್ಷಿಯಾಯಿತು. ಈ ವಾರ್ಡಿನಲ್ಲಿರೋ ಮನೆಗಳಲ್ಲಿ ಶೌಚಾಲಯಗಳು ಇಲ್ಲ. ಇದ್ದರೂ ಅವು ಬಳಕೆಗೆ ಯೋಗ್ಯವಲ್ಲ. ಹೀಗಾಗಿ ಬಹುತೇಕರು ಬಯಲಿನಲ್ಲಿಯೇ ಶೌಚಾಲಯಕ್ಕೆ ಹೋಗುತ್ತಾರೆ. ಇದರಿಂದ ಮಹಿಳೆಯರು, ಯುವತಿಯರಿಗೆ  ಕಾಮುಕರು ಕಾಟ  ಹೆಚ್ಚಾಗ್ತಿದೆ. ಇದನ್ನು ಗಮನಿಸಿದ ಸ್ಥಳೀಯ ತ್ರಿಶಾಲ್ ಎಂಬುವವರು​, ಐರಿನ್ ಅನ್ನೋವರಿಗೆ ಸಮಸ್ಯೆ ವಿವರಿಸಿದ್ದಾರೆ. ಈ ಹಿನ್ನಲೆಯಲ್ಲಿ  ಭಾಗ್ಯನಗರಕ್ಕೆ ಬಂದ ಐರಿನ್ ಶೌಚಾಲಯದ ಸಮಸ್ಯೆ ಅರಿತು ಫೇಸ್​ಬುಕ್ ಲೈವ್ ಮಾಡಿದರು. ಈ ವೇಳೆಯಲ್ಲಿ ಸಾಕಷ್ಟು ದಾನಿಗಳು ಸಮಸ್ಯೆಗೆ ಸ್ಪಂದಿಸುವುದಾಗಿ ಭರವಸೆ ನೀಡಿದ್ದಾರೆ .

ಇನ್ನು ಐರಿನ್​ ಹುಬ್ಬಳ್ಳಿಯಲ್ಲಿ ಹ್ಯಾಪಿ ಹೋಮ್​​​ ಚಿಲ್ಡ್ರನ್ ಆಶ್ರಮವೊಂದನ್ನು ನಡೆಸುತ್ತಿದ್ದಾರೆ. ಈ ಹಿಂದೆ ಇಂತಹ ಸಮಸ್ಯೆಗಳ ಬಗ್ಗೆ ಸಾಕಷ್ಟು ಬಾರಿ ಫೇಸ್​​ಬುಕ್​​ ಲೈವ್ ನಡೆಸಿದ್ದಾರಂತೆ. ಆಗ ಸಾಕಷ್ಟು ಜನರು ಸಹಾಯಕ್ಕೆ ಬಂದು ಸಮಸ್ಯೆಗಳನ್ನು ಬಗೆಹರಿಸಿದ್ದಾರೆ. ಈಗ  ಅದೇ ಉದ್ದೇಶ ಇಟ್ಟುಕೊಂಡ ಐರಿನ್​, ಶೌಚಾಲಯದ ಸಮಸ್ಯೆ ಕುರಿತು ಫೇಸ್​​​ಬುಕ್​ ಲೈವ್​ ನಡೆಸಿದ್ರು.  ಈ ವೇಳೆಯಲ್ಲಿ ಅವರು ಸ್ಥಳಿಯರೊಂದಿಗೆ ಸಮಸ್ಯೆ ಕುರಿತು ಚರ್ಚೆ ನಡೆಸಿ ಫೇಸ್ ​​ಬುಕ್​ ಲೈವ್​​​​​​ನಲ್ಲಿ ಸ್ಥಳಿಯರನ್ನು ಮಾತನಾಡಿಸಿದರು.

ಐರಿನ್​ ಫೇಸ್​ಬುಕ್​ ಲೈವ್ ನಡೆಸಿದ ವೇಳೆ ಸ್ಥಳೀಯ ಮಹಿಳೆಯರು ಸಹ ಅವರಿಗೆ ಸಾಥ್​ ನೀಡಿದ್ರು.. ಇನ್ನು ಬಾಬುಜಗಜೀವನರಾಂ ಕಾಲೋನಿಯಲ್ಲಿ ಶೌಚಾಲಯಗಳು ​​ ಇದ್ದರೂ ಸಹ ಅವು ಹಾಳಾಗಿ ಹೋಗಿವೆ. ಈ ಬಗ್ಗೆ ಐರಿನ್ ನಡೆಸಿದ ಫೇಸ್​ಬುಕ್ ಲೈವ್​ಗೆ ಸ್ಥಳೀಯರು ಕೂಡ ಶ್ಲಾಘಿಸಿದ್ರು.. ಸಾಕಷ್ಟು ಜನ ದಾನಿಗಳು ಕೂಡ  ಸಹಾಯ ಮಾಡಲು ಮುಂದಾದ್ರು. ಇನ್ನಾದ್ರು ಅಧಿಕಾರಿಗಳು ಎಚ್ಚೆತ್ತು ಈ ಸಮಸ್ಯೆಗೆ  ಸೂಕ್ತ ಪರಿಹಾರಿ ನೀಡ್ತಾರಾ  ಕಾದು ನೋಡಬೇಕಿದೆ.

Follow Us:
Download App:
  • android
  • ios