ತೀವ್ರ ಸುಟ್ಟ ಗಾಯಗಳಿಂದ ನರಳುತ್ತಿದ್ದ ಪ್ರೀಯಾಂಕಾ ಇಂದು ಚಿಕಿತ್ಸೆ ಫಲಕಾರಿಯಾಗದೇ ಇಲ್ಲಿನ ಬಸವೇಶ್ವರ ಆಸ್ಪತ್ರೆಯಲ್ಲಿ ಕೊನೆ ಉಸಿರೆಳೆದಿದ್ದಾರೆ.
ಕಲಬುರಗಿ(ಡಿ.2): ಕಲಬುರಗಿಯಲ್ಲಿ ಪತ್ನಿ ಅಡುಗೆಯಲ್ಲಿ ಎಣ್ಣೆ ಹೆಚ್ಚು ಹಾಕಿದ್ದಾಳೆ ಎಂಬ ಕಾರಣಕ್ಕೆ ಕೋಪಗೊಂಡ ಪತಿ ಮಹಾಶಯ ಹೆಂಡತಿಗೆ ಬೆಂಕಿ ಹಚ್ಚಿದ್ದ ಪೈಶಾಚಿಕ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾಳೆ.
ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ನೆಲೋಗಿಯಲ್ಲಿ ಕಳೆದ ನಾಲ್ಕು ದಿನಗಳ ಹಿಂದೆ ಈ ಘಟನೆ ನಡೆದಿತ್ತು.ತೀವ್ರ ಸುಟ್ಟ ಗಾಯಗಳಿಂದ ನರಳುತ್ತಿದ್ದ ಪ್ರೀಯಾಂಕಾ ಇಂದು ಚಿಕಿತ್ಸೆ ಫಲಕಾರಿಯಾಗದೇ ಇಲ್ಲಿನ ಬಸವೇಶ್ವರ ಆಸ್ಪತ್ರೆಯಲ್ಲಿ ಕೊನೆ ಉಸಿರೆಳೆದಿದ್ದಾರೆ.
ಅಡುಗೆಯಲ್ಲಿ ಎಣ್ಣೆ ಜಾಸ್ತಿ ಹಾಕಿದಳು ಎಂಬ ಒಂದೇ ಕಾರಣಕ್ಕೆ ಗಂಡ ಕುದಿಯುವ ಎಣ್ಣೆಯನ್ನ ಪತ್ನಿಯ ಮುಖಕ್ಕೆ ಎರಚಿದ್ದ. ಅಷ್ಟೇ ಅಲ್ಲದೇ ನೋವಿನಿಂದ ಕೂಗಾಡುತ್ತಿದ್ದ ಪತ್ನಿಯ ಮೈಮೇಲೆ ಸೀಮೆ ಎಣ್ಣೆ ಸುರಿದು ಕೊಲೆಗೆ ಯತ್ನಿಸಿದ್ದ ಪತಿ ಭೀಮಾಶಂಕರ.
ಕಟುಕ ಗಂಡನನ್ನ ಈಗಾಗಲೇ ನೆಲೋಗಿ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದು, ತಂದೆಯ ನೀಚ ಕೃತ್ಯದಿಂದ ಹದಿನೆಂಟು ತಿಂಗಳ ಹೆಣ್ಣು ಮಗು ತಾಯಿಯನ್ನ ಕಳೆದುಕೊಂಡು ಅನಾಥವಾಗಿದೆ.
