ನವದೆಹಲಿ(ಆ.06): ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿರುವ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿರುವ ಕೇಂದ್ರ ಸರ್ಕಾರದ ನಿರ್ಣಯವನ್ನು ಇಡೀ ದೇಶ ಒಂದಾಗಿ ಬೆಂಬಲ ನೀಡಿದೆ.

ಈ ವೇಳೆ ಲಡಾಕ್’ನ ಬಿಜೆಪಿ ಸಂಸರ ಜಮಿಯಾಂಗ್ ತ್ಸೆರಿಂಗ್ ಮಸೂದೆ ಬೆಂಬಲಿಸಿ ಮಾಡಿದ ಭಾಷಣಕ್ಕೆ ಇಡೀ ಲೋಕಸಭೆ ತಲೆದೂಗಿದ ಅಪರೂಪದ ಪ್ರಸಂಗ ನಡೆಯಿತು.

ಮಸೂದೆ ಬೆಂಬಲಿಸಿ ಮಾತನಾಡಿದ ಜಮಿಯಾಂಗ್, ದಶಕಗಳಿಂದ ಉಡುಗಿಸಲಾಗಿದ್ದ ಲಡಾಖ್ ಧ್ವನಿಯನ್ನು ಆಲಿಸಿದ ಕೇಂದ್ರ ಸರ್ಕಾರಕ್ಕೆ ಧನ್ಯವಾದ ಎಂದು ಹೇಳಿದರು.

ಲಡಾಕ್ ಸೇರಿದಂತೆ ಜಮ್ಮು ಮತ್ತು ಕಾಶ್ಮೀರದ ಇಂದಿನ ದುಸ್ಥಿಗೆ ರಾಜ್ಯವನ್ನು ಸುದೀರ್ಘವಾಗಿ ಆಳಿದ ಎರಡು ಕುಟುಂಗಳೇ ಕಾರಣ ಎಂದು ಪರೋಕ್ಷವಾಗಿ ಅಬ್ದುಲ್ಲಾ ಮತ್ತು ಮುಫ್ತಿ ಕುಟುಂಬವನ್ನು ಜಮಿಯಾಂಗ್ ಕುಟುಕಿದರು.

ಲಡಾಕ್ ಮೊದಲಿನಿಂದಲೂ ಕೇಂದ್ರಾಡಳಿತ ಪ್ರದೇಶಕ್ಕಾಗಿ ಆಗ್ರಹಿಸುತ್ತಿದ್ದು, ಜಮ್ಮು ಮತ್ತು ಕಾಶ್ಮೀರದ ಆಡಳಿತಗಾರರ ನಿರ್ಲಕ್ಷ್ಯಕ್ಕೊಳಗಾಗಿ ಅಭಿವೃದ್ಧಿ ಮರೀಚಿಕೆಯಾಗಿದೆ ಎಂದು ಜಮಿಯಾಂಗ್ ಆಕ್ರೋಶ ಹೊರಹಾಕಿದರು.

ಲಡಾಕ್ ಸಮಸ್ಯೆಯನ್ನು ಎಳೆಎಳೆಯಾಗಿ ಬಿಡಿಸಿಟ್ಟ ಜಮಿಯಾಂಗ್, ತಮ್ಮ ಭಾಷಣದ ಕೊನೆಯಲ್ಲಿ ಲಡಾಖ್ ಜನತೆಯ ಭಾರತೀಯತೆಯನ್ನು ಸದನದ ಮುಂದೆ ಅನಾವರಣಗೊಳಸಿದ್ದು ಸದನದ ಎಲ್ಲಾ ಸದಸ್ಯರನ್ನು ರೋಮಾಂಚನಗೊಳಿಸಿತು.