7 ಕಾಂಗ್ರೆಸ್ಸಿಗರಿಂದ ರಾಹುಲ್‌ಗೆ ರಕ್ತ ಪತ್ರ

ಕುಣಿಗಲ್(ನ.30): ಇತ್ತೀಚೆಗೆ ತುಮಕೂರು ಜಿಲ್ಲೆಯ ಕುಣಿಗಲ್‌ನಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ದಲಿತರನ್ನು ಕಡೆಗಣಿಸಿದ್ದಾರೆ ಎಂಬ ಆರೋಪಗಳು ಕೇಳಿ ಹಿನ್ನೆಲೆಯಲ್ಲಿ ತುಮಕೂರು ಯುವ ಕಾಂಗ್ರೆಸ್‌ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಗುತ ರಂಗನಾಥ್ ಸೇರಿ 7 ಮಂದಿ ಎಐಸಿಸಿ ಉಪಾಧ್ಯಕ್ಷ ರಾಹುಲ್‌ಗಾಂಧಿ ಅವರು ರಕ್ತದಲ್ಲಿ ಪತ್ರ ಬರೆದು ಕಳುಹಿಸಿದ್ದಾರೆ. ಕುಣಿಗಲ್ ಕ್ಷೇತ್ರದ

ಮಾಜಿ ಶಾಸಕ ರಾಮಸ್ವಾಮಿಗೌಡ ಅವರು ಸಮಾವೇಶದ ಬಳಿಕ, ‘ದಲಿತರನ್ನೆಲ್ಲ ಕಡೆಗಣಿಸಿ ಸಮಾವೇಶ ಮಾಡಲಾಗುತ್ತಿದೆ’ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ರಕ್ತದಲ್ಲಿ ಪತ್ರ ಬರೆಯಲಾಗಿದೆ