ಭಾರತೀಯ ರೈಲ್ವೆ ಇಲಾಖೆ ಭರ್ಜರಿ ಆಫರ್ ನೀಡುತ್ತಿದೆ. 2019ರಲ್ಲಿ ನಡೆಯುವ ಕುಂಭ ಮೇಳಕ್ಕೆ ಆಗಮಿಸುವ ಭಕ್ತರಿಗಾಗಿ ರೈಲ್ವೆ ಟಿಕೆಟ್ ದರದಲ್ಲಿ ಭಾರೀ ರಿಯಾಯಿತಿ ನೀಡಲಾಗುತ್ತಿದೆ. 

ನವದೆಹಲಿ : ಭಾರತೀಯ ರೈಲ್ವೆ ಇಲಾಖೆ 2019ನೇ ಸಾಲಿನ ಕುಂಭಮೇಳಕ್ಕೆ ತೆರಳುವವರಿಗೆ ಭರ್ಜರಿ ಗುಡ್ ನ್ಯೂಸ್ ಒಂದನ್ನು ನೀಡಿದೆ. 

ರೈಲ್ವೆ ಸಚಿವ ಪೀಯೂಷ್ ಗೋಯಲ್ ಕುಂಭಮೇಳಕ್ಕೆ ತೆರಳುವ ಭಕ್ತರಿಗೆ ರೈಲ್ವೆ ಟಿಕೆಟ್ ದರದಲ್ಲಿ ಭರ್ಜರಿ ರಿಯಾಯಿತಿ ನೀಡುತ್ತಿದೆ. 

ದೇಶದಾದ್ಯಂತ ಲಕ್ಷಾಂತರ ಸಂಖ್ಯೆಯಲ್ಲಿ ಕುಂಭಮೇಳಕ್ಕೆ ಆಗಮಿಸುವ ಭಕ್ತರು ಅತ್ಯಂತ ಕಡಿಮೆ ದರದಲ್ಲಿ ರೈಲ್ವೆ ಪ್ರಯಾಣ ಮಾಡಬಹುದಾಗಿದೆ.

ರೈಲ್ವೆ ಇಲಾಖೆ ಅತೀ ಕಡಿಮೆ ಎಂದರೆ 5 ರು.ವರೆಗೂ ಟಿಕೆಟ್ ದರ ಇಳಿಸಿದೆ. ಭಕ್ತರು ಹಾಗೂ ಪ್ರವಾಸಿಗರಿಗೆ ಟಿಕೆಟ್ ದರದಲ್ಲಿ ಹೆಚ್ಚಿನ ರಿಯಾಯ್ತಿ ನೀಡುತ್ತಿದೆ. ಇದರಿಂದ ಕುಂಭ ಮೇಳಕ್ಕೆ ಆಗಮಿಸುವವರಿಗೆ ಹೆಚ್ಚಿನ ಅನುಕೂಲ ಆಗಲಿದೆ ಎಂದು ಸಚಿವ ಗೋಯಲ್ ಹೇಳಿದ್ದಾರೆ. 

ರೈಲು ಟಿಕೆಟ್ ದರಗಳ ಆಫರ್ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಚಿತ್ರ ಇರುವ ಬ್ಯಾನರ್ ಬಿಡುಗಡೆ ಮಾಡಿದ್ದಾರೆ.

ಫಸ್ಟ್ ಕ್ಲಾಸ್ ಎಸಿ ಟ್ರೈನ್ ನಲ್ಲಿ ಕೇವಲ 40 ರು.ನಲ್ಲಿ ಪ್ರಯಾಣಿಸಬಹುದಾಗಿದೆ. ಎಕ್ಸ್ ಪ್ರೆಸ್ ಟ್ರೈನ್ ಚೇರ್ ಕಾರ್ ದರ 10 ರು, ಎಸಿ ತೃತೀಯ ದರ್ಜೆಗೆ 20 ರು. ನಿಗದಿಗೊಳಿಸಲಾಗಿದೆ.

ಸೆಕೆಂಡ್ ಕ್ಲಾಸ್ ಎಸಿ [2A] 30 ರು. ಹಾಗೂ ಮೊದಲ ದರ್ಜೆ ಎಸಿ ಟಿಕೆಟ್ ದರ 40 ರು.ಗೆ ನಿಗದಿಪಡಿಸಲಾಗಿದೆ. 

ಅರ್ಧ್ ಕುಂಭ ಮೇಳ ಪ್ರಯಾಗ್ ರಾಜ್ ನಲ್ಲಿ ಜನವರಿಯಲ್ಲಿ ಆಯೋಜನೆ ಮಾಡಲಾಗಿದೆ. ಈ ನಿಟ್ಟಿನಲ್ಲಿ ಉತ್ತರ ಪ್ರದೇಶ ಸರ್ಕಾರ ಪ್ರವಾಸಿಗರು ಹಾಗೂ ಭಕ್ತರಿಗೆ ಸಾಕಷ್ಟು ವ್ಯವಸ್ಥೆ ಕಲ್ಪಿಸುತ್ತಿದೆ.

800 ರೈಲು : ಕುಂಭ ಮೇಳದ ಹಿನ್ನೆಲೆಯಲ್ಲಿ ದೇಶದ ವಿವಿಧ ಭಾಗಗಳಿಂದ ಆಗಮಿಸಲು 800 ವಿಶೇ ರೈಲುಗಳ ಸಂಚಾರಕ್ಕೂ ಪ್ರಸ್ತಾವನೆ ಸಲ್ಲಿಸಲಾಗಿದೆ. ಅಲ್ಲದೇ ಲಹಾಬಾದ್ ನಿಂದ ದಿಲ್ಲಿಗೆ 5 ವಿಶೇಷ ರೈಲುಗಳ ಸಂಚಾರದ ಬಗ್ಗೆಯೂ ಕೂಡ ಪ್ರಸ್ತಾವನೆ ಇರಿಸಲಾಗಿದೆ. 

Scroll to load tweet…