ಕುಂಬಳಕಾಯಿ ಹಲ್ವಾ ರೆಸಿಪಿ..

ಕುಂಬಳಕಾಯಿ ಹಲ್ವಾ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ, ಅದರ ಸಿಹಿ ಘಮಕ್ಕೆ ಬಾಯಲ್ಲಿ ನೀರೂರುತ್ತದೆ. ಇದಕ್ಕೆ ಕಾಶಿ ಹಲ್ವಾ ಎಂದೂ ಕೂಡ ಇನ್ನೊಂದು ಹೆಸರಿನಿಂದ ಕರೆಯಲಾಗುತ್ತದೆ. ಸಂಕ್ರಾಂತಿ ಹಬ್ಬವೂ ಕೂಡ ಇನ್ನೆರಡು ದಿನ ಬಾಕಿ ಇದೆ. ಈ ವೇಳೆ ನೀವು ಕುಂಬಳಕಾಯಿ ಹಲ್ವಾ ತಯಾರಿಸಿ ಸವಿಯಲು ನಾವಿಂದು ಅದರ ರೆಸಿಪಿಯನ್ನು ನಿಮಗೆ ತಿಳಿಸುತ್ತೇವೆ.

ಬೇಕಾಗುವ ಸಾಮಾಗ್ರಿಗಳು

*ಗೋಡಂಬಿ

*ಕುಂಬಳಕಾಯಿ 2 ಕೆಜಿ

*ಸಕ್ಕರೆ ಅರ್ಧ ಕೆಜಿ

*ತುಪ್ಪ ಅರ್ಧ ಕೆಜಿ

*ಖೋವಾ 

*ದ್ರಾಕ್ಷಿ

*ಏಲಕ್ಕಿ ಪುಡಿ

*ಕೇಸರಿ ಬಣ್ಣ

ಮಾಡುವ ವಿಧಾನ

ಕುಂಬಳಕಾಯಿಯ ತಿರುಳು ಬೀಜ ಸಿಪ್ಪೆ ತೆಗೆದು ಮಿಕ್ಕ ಕಾಂಡವನ್ನು ತುರಿದು ಬೇಯಿಸಿಕೊಳ್ಳಬೇಕು

ಕುಂಬಳಕಾಯಿ ತುರಿ ಬೆಂದ ನಂತರ ಅದರ ರಸ ಜಾಸ್ತಿ ಇದ್ದರೆ ಅದನ್ನು ಹಿಂಡಿ ತೆಗೆಯಬೇಕು

ಬೆಂದ ನಂತರ ತಿರುಳಿಗೆ ಸಕ್ಕರೆ ಹಾಕಿ ಸಣ್ಣ ಉರಿಯಲ್ಲಿ ಒಲೆಯ ಮೇಲಿಟ್ಟು ತುಪ್ಪ ಸೇರಿಸಿ ಕಲಕುತ್ತಿರಿ

ಪಾತ್ರೆಗೆ ಅಂಟದ ಹಾಗೆ ಹದ ಬಂದಾಗ ಏಲಕ್ಕಿ ಪುಡಿ ಕೇಸರಿ ಬಣ್ಣ ಹಾಕಿ ಕಲಕಿ ಇಳಿಸಿಬಿಡಿ

ಇಳಿಸುವ ಮೊದಲು ಖೋವಾ ಪುಡಿ ಮಾಡಿ ಸೇರಿಸಿ

ತುಪ್ಪದಲ್ಲಿ ಹುರಿದ ದ್ರಾಕ್ಷಿ ಗೋಡಂಬಿ ಹಾಕಿ