ಕುಂಭ ಮೇಳಕ್ಕೂ ಮುನ್ನ ಉತ್ತರ ಪ್ರದೇಶದ ಸಾಧುಗಳಿಗೆ ತಟ್ಟಿದ ಬಿಸಿ ಮುಟ್ಟಿಸಲಾಗಿದೆ. 

ಅಯೋಧ್ಯಾ: ನಕಲಿ ಸಾಧುಗಳು ಹೆಚ್ಚುತ್ತಿರುವುದನ್ನು ತಡೆಯುವ ಉದ್ದೇಶದಿಂದ ಹಾಗೂ ಅಪರಾಧವನ್ನು ಮಟ್ಟಹಾಕುವ ನಿಟ್ಟಿನಿಂದ ಉತ್ತರ ಪ್ರದೇಶದ ಫೈಜಾಬಾದ್‌ ಜಿಲ್ಲಾಡಳಿತ ಸಾಧು, ಸಂತರನ್ನು ಪೊಲೀಸ್‌ ತಪಾಸಣೆಗೆ ಒಳಪಡಿಸಲು ನಿರ್ಧರಿಸಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

2019ರ ಕುಂಭ ಮೇಳಕ್ಕೂ ಮುನ್ನ ಸಾಧು ಸಂತರ ಹೆಸರನಲ್ಲಿ ನಡೆಯುವ ವಂಚನೆಯನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದ್ದು ಸಾಧುಗಳಿಂದಲೂ ಬೆಂಬಲ ವ್ಯಕ್ತವಾಗಿದೆ.

ಇದರಿಂದ ನಕಲಿ ಬಾಬಾಗಳು ಜನರನ್ನು ವಂಚಿಸಲು ಸಾಧ್ಯವಿಲ್ಲ ಹಾಗೂ ಸಂತರ ಘನತೆಗೂ ಧಕ್ಕೆ ಆಗುವುದಿಲ್ಲ ಎಂದು ರಾಮಜನ್ಮಭೂಮಿ ದೇವಾಲಯದ ಆಚಾರ್ಯ ಸತ್ಯೇಂದ್ರ ದಾಸ್‌ ಪ್ರತಿಕ್ರಿಯೆ ನೀಡಿದ್ದಾರೆ.