ವಿಧಾನಸಭೆ : ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಜುಲೈ 5ರಂದು ಮಂಡಿಸಿದ ಬಜೆಟ್‌ಗಿಂತ 5,622 ಕೋಟಿ ರು. ಹೆಚ್ಚಳದೊಂದಿಗೆ 2,24,110 ಕೋಟಿ ರು. ಗಾತ್ರದ ಬಜೆಟ್‌ಗೆ ಗುರುವಾರ ಉಭಯ ಸದನಗಳ ಅಂಗೀಕಾರ ಪಡೆದರು.

ಜುಲೈ 5ರಂದು ಮಂಡಿಸಿದ್ದ 2,18,488 ಕೋಟಿ ರು. ಬಜೆಟ್‌ ಅನ್ನು 5,622 ಕೋಟಿ ರು.ಗಳಷ್ಟುಹೆಚ್ಚಳ ಮಾಡಿ 2,24,110 ಕೋಟಿ ರು. ಮೊತ್ತದ ಬಜೆಟ್‌ಗೆ ಅನುಮೋದನೆ ಪಡೆದರು.

ಇದಕ್ಕೂ ಮೊದಲು 2018-19ನೇ ಸಾಲಿನ ಖರ್ಚು ವೆಚ್ಚಗಳಿಗಾಗಿ ಫೆಬ್ರುವರಿ 16ರಂದು ಅಂದಿನ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು 2.09 ಲಕ್ಷ ಕೋಟಿ ರು. ಮೊತ್ತದ ಬಜೆಟ್‌ ಮಂಡಿಸಿದ್ದರು. ಇದೀಗ ಸಿದ್ದರಾಮಯ್ಯ ಬಜೆಟ್‌ಗಿಂತ 15 ಸಾವಿರ ಕೋಟಿ ರು. ಹೆಚ್ಚು ಮೊತ್ತಕ್ಕೆ ಕುಮಾರಸ್ವಾಮಿ ಅಂಗೀಕಾರ ಪಡೆದರು.