ಬೇಹುಗಾರಿಕಾ ಆರೋಪದಡಿ ಗಲ್ಲುಶಿಕ್ಷೆಗೆ ಗುರಿಯಾಗಿರುವ ಮಾಜಿ ಸೇನಾಧಿಕಾರಿ ಕುಲಭೂಷಣ್ ಜಾಧವ್ ಗೆ ಗಲ್ಲುಶಿಕ್ಷೆ ನೀಡಿದ ತೀರ್ಪಿನ ಪ್ರತಿ, ಹಾಗೂ ಚಾರ್ಜ್ ಶೀಟ್ ಪ್ರತಿಯನ್ನು ನೀಡುವಂತೆ ಭಾರತ ಪಾಕ್ ಗೆ ಕೇಳಿದೆ.

ನವದೆಹಲಿ (ಏ.14): ಬೇಹುಗಾರಿಕಾ ಆರೋಪದಡಿ ಗಲ್ಲುಶಿಕ್ಷೆಗೆ ಗುರಿಯಾಗಿರುವ ಮಾಜಿ ಸೇನಾಧಿಕಾರಿ ಕುಲಭೂಷಣ್ ಜಾಧವ್ ಗೆ ಗಲ್ಲುಶಿಕ್ಷೆ ನೀಡಿದ ತೀರ್ಪಿನ ಪ್ರತಿ, ಹಾಗೂ ಚಾರ್ಜ್ ಶೀಟ್ ಪ್ರತಿಯನ್ನು ನೀಡುವಂತೆ ಭಾರತ ಪಾಕ್ ಗೆ ಕೇಳಿದೆ.

ಭಾರತದ ಹೈ ಕಮಿಷನರ್ ಗೌತಮ್ ಬಂಬಾವಾಲೆ ಪಾಕ್ ನ ವಿದೇಶಾಂಗ ಕಾರ್ಯದರ್ಶಿಯನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಗಲ್ಲುಶಿಕ್ಷೆ ತೀರ್ಪಿನ ಪ್ರತಿ ಹಾಗೂ ಚಾರ್ಜ್ ಶೀಟ್ ನ ಪ್ರತಿಯನ್ನು ಕೇಳಿದ್ದೇನೆ ಎಂದು ಗೌತಮ್ ಬಂಬಾವಾಲೆ ಹೇಳಿದ್ದಾರೆ.

ಭಾರತೀಯ ರಾಯಭಾರಿ ಜಾಧವ್ ರನ್ನು ಭೇಟಿ ಮಾಡಲು ಅವಕಾಶ ಕೊಡಿ ಎಂದು ಕಳೆದ ಒಂದು ವರ್ಷದಿಂದ 13 ಬಾರಿ ಕೇಳಿದ್ದು ನಮ್ಮ ಮನವಿಯನ್ನು ಪಾಕ್ ನಿರಾಕರಿಸಿದೆ. ಈ ಪ್ರಕರಣ ಗೂಢಾಚರ್ಯೆಗೆ ಸಂಬಂಧಿಸಿರುವುದರಿಂದ ಭೇಟಿಗೆ ಅವಕಾಶ ಕೊಡಲಾಗುವುದಿಲ್ಲವೆಂದು ಪಾಕ್ ವಿದೇಶಾಂಗ ಕಾರ್ಯದರ್ಶಿ ಹೇಳಿದ್ದಾರೆ. ಆದರೆ ಅಂತರಾಷ್ಟ್ರೀಯ ಕಾನೂನಿನ ಅಡಿಯಲ್ಲಿ ಅವಕಾಶ ನೀಡಬೇಕೆಂದು ಅಲ್ಲಿನ ಹೈಕೋರ್ಟ್ ಹೇಳುತ್ತದೆ. ಈಗ ಮತ್ತೊಮ್ಮೆ ಮನವಿ ಮಾಡಿದ್ದೇವೆ ಎಂದು ಗೌತಮ್ ಹೇಳಿದ್ದಾರೆ.

ಏತನ್ಮಧ್ಯೆ ಪಾಕಿಸ್ತಾನದ ತೀರ್ಪನ್ನು ವಿದೇಶಾಂಗ ವ್ಯವಹಾರ ಪ್ರಧಾನ ಮಂತ್ರಿ ಸಲಹೆಗಾರ ಸಮರ್ಥಿಸಿಕೊಂಡು, ಹಿಂದೂ, ಮುಸ್ಲೀಂ ಹೆಸರಿನಲ್ಲಿ ಜಾಧವ್ ಎರಡು ಪಾಸ್ ಪೋರ್ಟ್ ಯಾಕೆ ಹೊಂದಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಭಾರತದ ಬಳಿ ಉತ್ತರವಿಲ್ಲ ಎಂದಿದ್ದಾರೆ.