ಪಾಕಿಸ್ತಾನ ಸೇನಾ ನ್ಯಾಯಾಲಯವು ಜಾಧವ್ ಅವರಿಗೆ ಭಾರತವು ತೀವ್ರವಾಗಿ ಖಂಡಿಸಿತ್ತಲ್ಲದೆ ಅಂತರಾಷ್ಟ್ರೀಯ ನ್ಯಾಯಾಲಯದ ಮೋರೆ ಹೋಗಿತ್ತು. ಮೇ.15 ರಂದು ಭಾರತ ಹಾಗೂ ಪಾಕಿಸ್ತಾನ ಎರಡೂ ರಾಷ್ಟ್ರಗಳು ತಮ್ಮ ವಾದವನ್ನು ಮಂಡಿಸಿದ್ದವು.

ವಿಯನ್ನಾ(ಮೇ.17): ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ನ್ಯಾಯಾಲಯ ಭಾರತದ ನೌಕಾದಳದ ಅಧಿಕಾರಿ ಕುಲ್'ಭೂಷಣ್ ಜಾಧವ್ ಅವರ ಗಲ್ಲು ಶಿಕ್ಷೆಗೆ ಸಂಬಂಧಿಸಿದಂತೆ ನಾಳೆ ಮಧ್ಯಾಹ್ನ 3.30ಕ್ಕೆ ತೀರ್ಪು ನೀಡಲಿದೆ.

ಪಾಕಿಸ್ತಾನ ಸೇನಾ ನ್ಯಾಯಾಲಯವು ಜಾಧವ್ ಅವರಿಗೆ ಭಾರತವು ತೀವ್ರವಾಗಿ ಖಂಡಿಸಿತ್ತಲ್ಲದೆ ಅಂತರಾಷ್ಟ್ರೀಯ ನ್ಯಾಯಾಲಯದ ಮೋರೆ ಹೋಗಿತ್ತು. ಮೇ.15 ರಂದು ಭಾರತ ಹಾಗೂ ಪಾಕಿಸ್ತಾನ ಎರಡೂ ರಾಷ್ಟ್ರಗಳು ತಮ್ಮ ವಾದವನ್ನು ಮಂಡಿಸಿದ್ದವು.

ಭಾರತದ ವಾದ ಮಂಡಿಸಿದ್ದ ಖ್ಯಾತ ನ್ಯಾಯವಾದಿ ಹರೀಶ್ ಸಾಳ್ವೆ ಪಾಕಿಸ್ತಾನ ಆರೋಪವೆಲ್ಲವೂ ನಿರಾಧಾರ. ಅಲ್ಲದೆ ತೀರ್ಪು ಬರುವುದಕ್ಕಿಂತ ಮುನ್ನವೆ ಗಲ್ಲು ಶಿಕ್ಷೆ ವಿಧಿಸುವ ಸಾಧ್ಯತೆಯಿದೆ ಎಂದು ಆತಂಕ ವ್ಯಕ್ತಪಡಿಸಿದ್ದರು. ಆದರೆ ಪಾಕ್'ನ ವಕೀಲರು ಭಾರತದ ವಾದವನ್ನು ನಿರಾಕರಿಸಿದ್ದರು.

ಭಾರತದ ನೌಕಾದಳದ ಅಧಿಕಾರಿಯಾಗಿದ್ದ ಜಾಧವ್ ಅವರನ್ನು ಇರಾನ್ ಮೂಲಕ ಅಕ್ರಮವಾಗಿ ಪ್ರವೇಶ ಮಾಡಿದ್ದ ಕಾರಣಕ್ಕೆ 2016ರ ಮಾರ್ಚ್'ನಲ್ಲಿ ಬಂಧಿಸಲಾಗಿತ್ತು. ಗುಪ್ತಚರ ಇಲಾಖೆಯ ಅಧಿಕಾರಿಯಾಗಿ ಪಾಕ್'ನ ಬಲೂಚಿಸ್ತಾನದಲ್ಲಿ ನಡೆಯುತ್ತಿರುವ ಸೇನೆ ಹಾಗೂ ಸ್ಥಳೀಯರ ಸಂಘರ್ಷದಲ್ಲಿ ಇವರ ಕೈವಾಡವಿದೆ ಎಂದು ಗಂಭೀರ ಆರೋಪ ಮಾಡಲಾಗಿದೆ.