ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದ ಪ್ರಧಾನ ಸೇವೆಗಳಲ್ಲಿ ಒಂದಾದ ಆಶ್ಲೇಷ ಬಲಿ ಸೇವೆಯನ್ನು ಬುಧವಾರ ಸಂಜೆ ಶ್ರೀ ದೇವಳದ ವತಿಯಿಂದ ನಡೆಸಲಾಯಿತು. ಗುರುವಾರ ದಿಂದ ಭಕ್ತರಿಗೆ ಸಂಜೆಯ ಸೇವೆಗೆ ಅವಕಾಶ ಒದಗಿಸ ಲಾಗಿದೆ. 

ಈವರೆಗೆ ಕುಕ್ಕೆ  ದೇವಳದಲ್ಲಿ ಈ ಸೇವೆಯನ್ನು ಬೆಳಗ್ಗಿನ ಸಮಯದಲ್ಲಿ ಮಾತ್ರ ನಡೆಸಲಾಗುತ್ತಿತ್ತು. ಇದರಿಂದ ಭಕ್ತರಿಗೆ ಒತ್ತಡ ಉಂಟಾಗುತ್ತಿತ್ತು. ಇದನ್ನು ನಿವಾರಣೆಗಾಗಿ ಸಂಜೆ ವೇಳೆಯೂ ಆಶ್ಲೇಷ ಬಲಿ ಸೇವೆ ನಡೆಸಲು ನಿರ್ಧರಿಸಿದೆ. ಬುಧವಾರ ಸಂಜೆ 6 ಗಂಟೆಗೆ ಶ್ರೀ ದೇವಳದ ವತಿಯಿಂದ ಆಶ್ಲೇಷ ಬಲಿ ಸೇವೆ ಆರಂಭವಾಯಿತು. 

ಯಾವುದೇ ಬುಕ್ಕಿಂಗ್ ಇಲ್ಲ: ಆಶ್ಲೇಷ ಬಲಿ ಸೇವೆ ನೆರವೇರಿಸಲು ಮುಂಗಡ ಬುಕ್ಕಿಂಗ್ ಇರುವುದಿಲ್ಲ. ಬೆಳಗ್ಗೆ 3 ಹಂತದಲ್ಲಿ, ಸಂಜೆ 1 ಹಂತದಲ್ಲಿ ನಡೆಯಲಿದೆ. ಸಂಜೆಯ ಆಶ್ಲೇಷ ಬಲಿ ಸೇವೆಗೆ ಭಕ್ತರು ಮಧ್ಯಾಹ್ನ 12.30ರಿಂದ 4.30ರವರೆಗೆ ಸೇವಾ ರಶೀದಿ ಪಡೆಯಬಹುದು. ಸಂಜೆ 5 ರ ನಂತರ ಸೇವೆ ಪ್ರಾರಂಭವಾಗುತ್ತದೆ.