Asianet Suvarna News Asianet Suvarna News

ಕುಕ್ಕೆ ಸಂಪುಟ ಮಠದ ಸ್ವಾಮೀಜಿ ಮೇಲೆ ಆರೋಪ

ಕುಕ್ಕೆ ಸಂಪುಟ ನರಸಿಂಹಸ್ವಾಮಿ ಮಠದ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಗಳ ವಿರುದ್ಧ ಕುಕ್ಕೆ ಸುಬ್ರಮಣ್ಯ ದೇವಸ್ಥಾನದ ಸುಬ್ರಹ್ಮಣ್ಯ ದೇವಸ್ಥಾನ ಮತ್ತು ಭಕ್ತರ ಹಿತರಕ್ಷಣಾ ವೇದಿಕೆ ಪ್ರಧಾನ ಕಾರ್ಯದರ್ಶಿ ಶ್ರೀನಾಥ್‌ ಆರೋಪವೊಂದನ್ನು ಮಾಡಿದ್ದಾರೆ. 

Kukke Subramanya Temple General Secretary Allegation Against Samputa Mutt
Author
Bengaluru, First Published Dec 11, 2018, 8:58 AM IST

ಬೆಂಗಳೂರು :  ಕುಕ್ಕೆ ಸಂಪುಟ ನರಸಿಂಹಸ್ವಾಮಿ ಮಠದ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಗಳು ಮಠವನ್ನು ವಾಣಿಜ್ಯ ಚಟುವಟಿಕೆಗಳಿಗೆ ಬಳಸುತ್ತಿದ್ದಾರೆ ಎಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಮತ್ತು ಭಕ್ತರ ಹಿತರಕ್ಷಣಾ ವೇದಿಕೆ ಪ್ರಧಾನ ಕಾರ್ಯದರ್ಶಿ ಶ್ರೀನಾಥ್‌ ಆರೋಪಿಸಿದ್ದಾರೆ.

ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಕಾನೂನು ಬಾಹಿರವಾಗಿ ಕೊಳವೆ ಅಳವಡಿಸಿ ವಸತಿಗೃಹಗಳಿಗೆ ನೀರನ್ನು ತರಲಾಗಿದೆ. ಮಠದಲ್ಲಿ ವಾಣಿಜ್ಯ ಉದ್ದೇಶಕ್ಕೆ 30 ಹಸುಗಳನ್ನು ಸಾಕಾಣಿಕೆ ಮಾಡಲಾಗಿದೆ. ಇದನ್ನು ಪ್ರಶ್ನಿಸಿದವರ ಮೇಲೆ ಅನಗತ್ಯ ದೂರು ನೀಡಿ ಆರೋಪಿಗಳನ್ನಾಗಿ ಮಾಡಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಟ್ರಸ್ಟೀಗಳ ಮೇಲೂ ಅನಗತ್ಯ ದೂರನ್ನು ಸಲ್ಲಿಸಿದ್ದಾರೆ ಎಂದು ದೂರಿದರು.

ಹಲವು ವರ್ಷಗಳಿಂದ ದೇವಸ್ಥಾನದ ಧ್ವನಿವರ್ಧಕ (ಮೈಕ್‌) ಚಾಲನೆಯಲ್ಲಿದ್ದು, ಇದೀಗ ಮಠದಲ್ಲಿರುವ ಐಷಾರಾಮಿ ವಸತಿಗೃಹದ ಗ್ರಾಹಕರಿಗೆ ಹಾಗೂ ಮಠದಲ್ಲಿ ಪೂಜೆ ಮಾಡುವುದಕ್ಕೆ ತೊಂದರೆಯಾಗುತ್ತಿದೆ ಎನ್ನುತ್ತಾರೆ. ಈಗಾಗಲೇ ಮಠದ ಸ್ವಾಮೀಜಿ ವಿರುದ್ಧ ಕ್ರಮಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ, ಮಠದ ಪ್ರಧಾನ ರಸ್ತೆಯಲ್ಲಿ ಸತ್ಯಾಗ್ರಹವನ್ನು ಹಿತರಕ್ಷಣಾ ವೇದಿಕೆ ಆರಂಭಿಸಿದೆ. ಶ್ರೀಗಳ ವಿರುದ್ಧ ಕ್ರಮಕೈಗೊಳ್ಳುವವರಿಗೂ ಸತ್ಯಾಗ್ರಹ ಕೈಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

Follow Us:
Download App:
  • android
  • ios